- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶೋಭಾ ಬಿರಾದಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಶೋಭಾ ಬಿರಾದಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ವಿಜಯಪುರ : ನಗರದ ಅಕ್ಕಮಹಾದೇವಿ ರಸ್ತೆ ನಿವಾಸಿ ಶೋಭಾ ಮಲ್ಲನಗೌಡ ಬಿರಾದಾರ (58) ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನ ಹೊಂದಿದರು.

ಮೃತರು ಬಿ.ಎಲ್.ಡಿ.ಇ ಹಿಂದಿನ ಚೇರಮನ್ ರಾಗಿದ್ದ ಬಿ.ಆರ್.ಪಾಟೀಲ ಲಿಂಗದಳ್ಳಿಯವರ ದ್ವಿತೀಯ ಸುಪುತ್ರಿಯಾಗಿದ್ದು, ಅವರ ಪತಿ ಮಲ್ಲನಗೌಡ ಬಿರಾದಾರ ಎರಡು ತಿಂಗಳ ಹಿಂದೆಯೇ ನಿಧನ ಹೊಂದಿದ್ದಾರೆ.

ಮೃತರ ಪುತ್ರಿ ಅರ್ಪಿತಾಳನ್ನು ವಿಧಾನಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿಯವರ ಪುತ್ರನೊಂದಿಗೆ ವಿವಾಹವಾಗಿ, ಹುಬ್ಬಳಿಯಲ್ಲಿ ನೆಲೆಸಿದ್ದಾರೆ. ಪುತ್ರ ಅತ್ರಿಷ ಆರ್ಥೋಪಿಡಿಕ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ.

ಮೃತರು ತಾಯಿ, ಸಹೋದರರಾದ ಬಿ.ಎಲ್.ಡಿ.ಇ ನಿರ್ದೇಶಕ, ಖ್ಯಾತ ಆರ್ಥೋಪಿಡಿಕ್ ಸರ್ಜನ್ ಡಾ.ಅನಿಲ ಪಾಟೀಲ ಲಿಂಗದಳ್ಳಿ, ಅರವಿಂದ ಪಾಟೀಲ, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಮೃತರಿಗೆ ವಿಧಾನಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ದಂಪತಿಗಳು, ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ದಂಪತಿಗಳು, ಹಿರಿಯರಾದ ಬಸನಗೌಡ ಪಾಟೀಲ ಚಬನೂರ, ಬಿ.ಎಸ್.ಪಾಟೀಲ ಯಾಳಗಿ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!