- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಶಿಕ್ಷಕರ ಕಡೆಗಣನೆ. ಸರಕಾರಕ್ಕೆ ಎಚ್ಚರಿಕೆ ನೀಡಿದ ಕ್ಯಾಮ್ಸ ಜಿಲ್ಲಾಧ್ಯಕ್ಷ

ಶಿಕ್ಷಕರ ಕಡೆಗಣನೆ. ಸರಕಾರಕ್ಕೆ ಎಚ್ಚರಿಕೆ ನೀಡಿದ ಕ್ಯಾಮ್ಸ ಜಿಲ್ಲಾಧ್ಯಕ್ಷ

ಬಸವನಬಾಗೇವಾಡಿ : ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸರ್ಕಾರ ಯಾವುದೇ ಪರಿಹಾರ ಘೋಷಿಸಿದೇ ಇರುವುದಕ್ಕೆ ವಿಜಯಪುರ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ) ಮತ್ತು ಶಿಕ್ಷಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಖಾಸಗಿ ಶಾಲೆಗಳು ಹಾಗೂ ಅವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಮುಖ್ಯಮಂತ್ರಿಗಳು ಕಡೆಗಣಿಸಿದ್ದಾರೆ. ಕೋವಿಡ್ ಸಂಕಷ್ಟದಿಂದ ಈಗಾಗಲೇ ಸಣ್ಣಪುಟ್ಟ ಶಾಲೆಗಳು ಮುಚ್ಚಿವೆ ಇನ್ನೂ ಕೆಲವು ಮುಚ್ಚುವ ಹಂತ ತಲುಪಿವೆ. ಇದರಿಂದ ಸಾವಿರಾರು ಶಿಕ್ಷಕರು ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ಕೋರಿ ಸಾಕಷ್ಟು ಸಲ ಸರಕಾರಕ್ಕೆ ನಮ್ಮ ಜಿಲ್ಲಾ ಸಂಘಟನೆಯಿಂದ (ಕ್ಯಾಮ್ಸ) ಮನವಿ ಸಲ್ಲಿಸಿದ್ದರೂ ಸರಕಾರ ಶಿಕ್ಷಕರನ್ನು ಕಡೆಗಣಿಸಿದೆ ಇದರ ವಿರುದ್ದ ಮುಂದಿನ ದಿನಗಳಲ್ಲಿ ಜಿಲ್ಲಾ ಸಂಘಟನೆಯಿಂದ ಜಿಲ್ಲೆಯಾದ್ಯಂತ ಮತ್ತು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕ್ಯಾಮ್ಸ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರನ್ನೂ ಕೊರೋನಾ ವಾರಿಯರ್ಸ್ಗಳೆಂದು ಪರಿಗಣಿಸಿರುವುದು ಸ್ವಾಗತಾರ್ಹ. ಆದರೆ ಯಾವುದೇ ಆರ್ಥಿಕ ನೇರವು ನೀಡದಿರುವುದು ಖಂಡನೀಯ. ಶಿಕ್ಷಕರಿಗೆ ಪರಿಹಾರ ಕೊಡಿಸುವಲ್ಲಿ ವಿಫಲರಾಗಿರುವ ಶಿಕ್ಷಣ ಸಚಿವರು ಎಲ್ಲಾ ವಿಧಾನ ಪರಿಷತ್ ಸದಸ್ಯರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!