- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಸಕ ಸೋಮನಗೌಡರ ಎದುರು ಕಣ್ಣೀರಿಟ್ಟು ಗೋಗರೆದ ಮಹಿಳೆಯರು

ಶಾಸಕ ಸೋಮನಗೌಡರ ಎದುರು ಕಣ್ಣೀರಿಟ್ಟು ಗೋಗರೆದ ಮಹಿಳೆಯರು

ದೇವರಹಿಪ್ಪರಗಿ : ಗ್ರಾಮದ ಎಂಎಸ್‌ಐಎಲ್ ಮದ್ಯದ ಅಂಗಡಿ ಪರವಾನಗಿ ರದ್ದು ಪಡಿಸಿ, ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಮಹಿಳೆಯರು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಗ್ರಾ.ಪಂ. ಕಛೇರಿಗೆ ಭೀಗ. ಮಹಿಳೆಯರಿಂದ ಪ್ರತಿಭಟನೆ

ತಾಲ್ಲೂಕಿನ ಮುಳಸಾವಳಗಿ ಗ್ರಾಮದ ನೂರಾರು ಮಹಿಳೆಯರು ಪಟ್ಟಣಕ್ಕೆ ಆಗಮಿಸಿದ್ದ ಶಾಸಕರಿಗೆ ಮದ್ಯದ ಅಂಗಡಿ ರದ್ದುಪಡಿಸಲು ಆಗ್ರಹಿಸಿ, ಯಮನವ್ವ ತಳವಾರ, ಸುಸಲವ್ವ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ಪ್ರತಿ ಕುಟುಂಬದಲ್ಲಿ ಕುಡಿತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಮದ್ಯದ ಅಂಗಡಿಯವರು ಕುಡಿಯುವವರು ಫೋನ್ ಮಾಡುವುದೇ ತಡ ಮನೆಗೆ ಮದ್ಯ ಪೂರೈಸುತ್ತಿದ್ದಾರೆ. ಇದು ಯುವಕರು ಮದ್ಯದ ಕಡೆಗೆ ಸೆಳೆಯಲು ಕಾರಣವಾಗಿದೆ. ಕಳೆದ ವರ್ಷ ಯುವಕನೊಬ್ಬ ಕುಡಿದು ಅಂಗಡಿಯ ಮುಂದೆಯೇ ಮೃತಪಟ್ಟ ಘಟನೆ ಜರುಗಿದೆ ಎಂದು ಮನವರಿಕೆ ಮಾಡಿದರು.

ಅಲ್ಲದೇ ಈ ಕುಡಿತದ ಚಟದಿಂದ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲು ಇಟ್ಟ ಹಣವನ್ನು ಗಂಡಂದಿರು ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ನಾವು ಹೆಣ್ಣುಮಕ್ಕಳು ದುಡಿದದ್ದನ್ನು ಸಹ ಕಸಿದುಕೊಂಡು ಕುಡಿಯಲು ಖರ್ಚು ಮಾಡುತ್ತಿದ್ದು, ಕೂಡಲೇ ನಮ್ಮ ಬಡಕುಟುಂಬಗಳಿಗೆ ಕಂಟಕವಾದ ಸರ್ಕಾರಿ ಮದ್ಯದ ಅಂಗಡಿ ಪರವಾನಗಿಯನ್ನು ಕೂಡಲೇ ರದ್ದು ಪಡಿಸಿ ಗ್ರಾಮದಿಂದ ತೆರವುಗೊಳಿಸಬೇಕು ಎಂದು ಶಾಸಕರ ಮುಂದೆ ಮಹಿಳೆಯರು ಕಣ್ಣಿರಿಟ್ಟರು. ಒಂದು ವೇಳೆ ನಿಮಗೆ ಕ್ರಮ ಕೈಗೊಳ್ಳಲು ಆಗದಿದ್ದಲ್ಲಿ ನಮಗೆ ವಿಷವಾದರೂ ನೀಡಿ ಎಂದು ಗೋಗರೆದರು.

ಈ ಸಂದರ್ಭದಲ್ಲಿ ಶೋಭಿತಾ ನಾಯ್ಕೋಡಿ, ಪಾರ್ವತಿ ಹಿಟ್ನಳ್ಳಿ, ಸಾಬವ್ವ ಗೊಬ್ಬೂರ, ನೀಲಮ್ಮ ತಳವಾರ, ಶೋಭಾ ತಳವಾರ, ಶಾಂತಾಬಾಯಿ ಸಾಲೋಟಗಿ, ಸರೂಬಾಯಿ ದ್ಯಾಬೇರಿ, ಶಾರದಾ ಮಾದರ, ಬಾಳವ್ವ ನಾಗಠಾಣ, ದಾನಮ್ಮ ಗುಡ್ನಳ್ಳಿ, ಭೋರಮ್ಮ ರೂಗಿ, ತಿಪ್ಪವ್ವ ನಾಯ್ಕೋಡಿ, ಮಹಾದೇವಿ ತಳವಾರ, ಸತ್ಯಮ್ಮ ನಾಯ್ಕೋಡಿ, ಲಕ್ಷ್ಮೀಬಾಯಿ ದ್ಯಾಬೇರಿ, ಮಲ್ಲಮ್ಮ ತಳವಾರ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಇದ್ದರು.

“ಗ್ರಾಮದ ಮಹಿಳೆಯರ ಸಂಕಷ್ಟಗಳ ಅರಿವು ನನಗಿದೆ. ಮದ್ಯದ ಅಂಗಡಿ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.”

ಸೋಮನಗೌಡ ಪಾಟೀಲ ಸಾಸನೂರ. ಶಾಸಕರು.

ವರದಿ : ಪ್ರದೀಪ ಕುಲಕರ್ಣಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!