- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಸಕ ಸಾಸನೂರಗೆ ಸಚಿವ ಸ್ಥಾನ ನೀಡಿ. ಕಾರ್ಯಕರ್ತರಿಂದ ಒತ್ತಾಯ

ಶಾಸಕ ಸಾಸನೂರಗೆ ಸಚಿವ ಸ್ಥಾನ ನೀಡಿ. ಕಾರ್ಯಕರ್ತರಿಂದ ಒತ್ತಾಯ

ಬಸವನಬಾಗೇವಾಡಿ : ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ನೂತನ ಸಚಿವ ಸಂಪುಟ ರಚನೆಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಜಂಬಲದಿನ್ನಿ (ನಾಗರಾಳ ಹುಲಿ) ಹಾಗೂ ಬಿಜೆಪಿ ಮಂಡಲ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳ ಒತ್ತಾಯಿಸಿದ್ದಾರೆ.

ಈ ಕುರಿತಾಗಿ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು,  ಸೋಮನಗೌಡ ಪಾಟೀಲರು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದಾರೆ. ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯವಿರುವ ವ್ಯಕ್ತಿಯಾಗಿದ್ದಾರೆ ಜನಸಾಮಾನ್ಯರ ಕಷ್ಟಗಲನ್ನು ಅರಿತಿದ್ದು, ಸಚಿವ ಸ್ಥಾನ ನೀಡಿದರೆ ಅವರಿಗೆ ಇನ್ನಷ್ಟು ಅಭಿವೃದ್ಧಿ ಮಾಡಲು ಸಹಕಾರಿಯಾಗಲಿರುವ ಕಾರಣ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ತಾಲ್ಲೂಕು ಉಪಾಧ್ಯಕ್ಷ ಗುರುರಾಜ್ ದಳವಾಯಿ, ಬಿಜೆಪಿ ಮಂಡಲ ಕಾರ್ಯಕಾರಿಣಿ ಸದಸ್ಯ ಶೇಖರಗೌಡ ಬಿರಾದಾರ, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಕಾನದಾರ, ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಣಿ ಸದಸ್ಯ ಮೌಲಾಲಿ ಚಪ್ಪರಬಂದ, ಬಿಜೆಪಿ ಯುವ ಮುಖಂಡ ಶಿವಾನಂದ ಹುಲ್ಲೂರ, ಮಲ್ಲು ಗೋನಾಳ, ಮಲ್ಲು ಹಾಲಿಹಾಳ, ಸಾಹೇಬಗೌಡ ನನ್ನೂರ, ಬಸವರಾಜ ಕೊಲಕಾರ, ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!