- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಸಕ ನಡಹಳ್ಳಿ ಕುಟುಂಬದಿಂದ ಕ್ಯಾಂಟೀನ್ ಉದ್ಘಾಟನೆ

ಶಾಸಕ ನಡಹಳ್ಳಿ ಕುಟುಂಬದಿಂದ ಕ್ಯಾಂಟೀನ್ ಉದ್ಘಾಟನೆ

ಮುದ್ದೇಬಿಹಾಳ : ಕೋರೊನಾ ಎರಡನೇ ಅಲೇ ತೀವೃತೆ ಹೆಚ್ಚಾಗಿರುವ ನಿಟ್ಟಿನಲ್ಲಿ ತಾಲೂಕಾ ಸರಕಾರಿ ಆಸ್ಪತ್ರೆಯ ಕೋವಿಡ್ ಸೊಂಕಿತರು, ಅವರ ಕುಟುಂಭದವರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಕೋವಿಡ್ ಮುಕ್ತಾಯವಾಗವುವವರೆಗೂ ದಿನದ 24 ಗಂಟೆ ಉತ್ತಮ ಗುಣಮಟ್ಟ ಪೌಷ್ಠಿಕಾಂಶಯುಳ್ಳ ಆಹಾರ ನೀಡಲಾಗುವುದು ಎಂದು ಸಮಾಜ ಸೇವಕಿ ಮಹಾದೇವಿ ಎ ಪಾಟೀಲ (ನಡಹಳ್ಳಿ) ಹೇಳಿದರು.

ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಶಾಸಕ ಎ ಎಸ್ ಪಾಟೀಲ (ನಡಹಳ್ಳಿ) ಯವರ ಕುಟುಂಬದಿಂದ ಕೋವಿಡ್ ಸೊಂಕಿತರಿಗೆ, ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರ ವಿತರಣೆ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು,  ಶಾಸಕರ ಎ ಎಸ್ ಪಾಟೀಲ (ನಡಹಳ್ಳಿ) ಯವರು ಸಧ್ಯ ಹೋಮ್ ಕ್ವಾರಂಟೈನಲ್ಲಿದ್ದರು ಮತಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಗಂಭೀರ ಚಿಂತನೆ ಮಾಡುತ್ತಲೆ ಇದ್ದಾರೆ ಅವರ ಆಶಯದಂತೆ ತಾಲೂಕು ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ಮತ್ತು ಅವರೂಂದಿಗೆ ಬಂದ ಕುಟುಂಬದ ಸದಸ್ಯರಿಗೆ ವೈದ್ಯರು ವೈದ್ಯಕೀಯ ಸಿಬ್ಬಂದಿಗಳಿಗೆ ಪೌಷ್ಟಿಕಾಂಶಯುಳ್ಳ ಉತ್ತಮ ಆಹಾರವನ್ನು ಪೂರೈಸಲು ಕ್ಯಾಂಟೀನ್ ಆರಂಭಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಸತೀಶ್ ತಿವಾರಿ, ಆಸ್ಪತ್ರೆಯ ಆಡಳಿತ ಅಧಿಕಾರಿ ಅನಿಲ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, 108 ಆರೋಗ್ಯ ರಕ್ಷಾಕವಚದ ಸಿಬ್ಬಂದಿ ಶ್ರೀಶೈಲ್ ಹೂಗಾರ, ಸಂಗಮ್ಮ ದೇವರಳ್ಳಿ, ಡಾ.ಅನೀಲಕೂಮಾರ ಶೇಗುಣಸಿ, ಬಸಯ್ಯಾ ನಂದಿಕೇಶ್ವರಮಠ ಸೇರಿದಂತೆ ಹಲವರು ಇದ್ದರು.

ವರದಿ : ಶ್ರೀಪಾದ ಜಂಬಗಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!