- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಸಕ ನಡಹಳ್ಳಿಗೆ ಸಚಿವ ಸ್ಥಾನ ನೀಡಿ. ಸಿಎಂ, ವರಿಷ್ಠರಿಗೆ ಬಿಜೆಪಿ ಮುಖಂಡರುಗಳಿಂದ ಮನವಿ

ಶಾಸಕ ನಡಹಳ್ಳಿಗೆ ಸಚಿವ ಸ್ಥಾನ ನೀಡಿ. ಸಿಎಂ, ವರಿಷ್ಠರಿಗೆ ಬಿಜೆಪಿ ಮುಖಂಡರುಗಳಿಂದ ಮನವಿ

ನಾಲತವಾಡ : ಆಲಮಟ್ಟಿ, ನಾರಾಯಣಪೂರ ಜಲಾಶಯ ಇದ್ದರೂ ಬೇರೆ ಜಿಲ್ಲೆಯವರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದೇವೆ. ಆದರೆ ನಮ್ಮ ಜಿಲ್ಲೆ ಸಮಗ್ರ ನೀರಾವರಿಯಿಂದ ವಂಚಿತವಾಗಿದೆ. ಹೀಗಾಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಬೇಕು ಎಂದು ಹಿರೇಮುರಾಳದ ಬಿಜೆಪಿ ಮುಖಂಡ ಬಸನಗೌಡ ಬಿ.ಪಾಟೀಲ್ ಮನವಿ ಮಾಡಿದರು.

ಸಮೀಪದ ಹಿರೇಮುರಾಳದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್, ಕುಡಿವ ನೀರು, ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಗ್ರಾಮೀಣ ಹಾಗೂ ನಗರದ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಕೆಲಸ ಮಾಡಿರುವ ಶಾಸಕ ನಡಹಳ್ಳಿ ಅವರು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಹಿರಿತನ ಗಮನಿಸಿ ಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ಮಾರುತಿ ಭೋವೇರ ಮಾತನಾಡಿ, ಕಳೆದ ಮೂವ್ವತ್ತು ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಆಗದಷ್ಟು ಕೆಲಸವನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಮೂರೇ ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮೀತ ಷಾ, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕರಿದ್ದು ಮಹತ್ವದ ಅಭಿವೃದ್ಧಿ ಕೆಲಸ ಮಾಡಿರುವ ನಡಹಳ್ಳಿ ಅವರಿಗೆ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಸಚಿವ ಸ್ಥಾನದ ಜವಾಬ್ದಾರಿ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಯುವ ಮುಖಂಡ ಅಪ್ಪಣ್ಣ ಧನ್ನೂರ ಮಾತನಾಡಿ,ಶಾಸಕ ನಡಹಳ್ಳಿ ಅವರು ಉತ್ತರ ಕರ್ನಾಟಕದಲ್ಲಿ ಅವಳಿ ಜಿಲ್ಲೆಯ ನೀರಾವರಿ ವಿಷಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. 2006ರಲ್ಲಿ ಆರಂಭವಾಗಿದ್ದ ನೀರಾವರಿ ಯೋಜನೆ 2018ರಲ್ಲಿ ಪೂರ್ಣಗೊಂಡಿದ್ದರೂ ನೀರು ತಾಲೂಕಿನ ಜಮೀನುಗಳಿಗೆ ಹರಿದಿರಲಿಲ್ಲ. ಆದರೆ ಶಾಸಕರಾಗಿ ನಡಹಳ್ಳಿ ಅವರು ಆಯ್ಕೆಯಾದ ಬಳಿಕ ಕೆರೆಗಳಿಗೆ ನೀರು ತುಂಬಿಸಿ ನೀರಾವರಿ ಸೌಲಭ್ಯ ದೊರೆಯುವಂತೆ ನೋಡಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಗೋವಾ, ಮಹಾರಾಷ್ಟ್ರದ ಭಾಗದಲ್ಲಿ ಗುಳೇ ಹೋಗಿದ್ದ ಕಾರ್ಮಿಕರನ್ನು ಕರೆತಂದಿರುವ ಜನಪರ ಕಳಕಳಿ ಉಳ್ಳ ನಾಯಕರಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡ ಭವನ ಇಲ್ಲದೇ ಜಿಲ್ಲೆ ಅನಾಥ. ನ್ಯಾಯವಾದಿ  ಭೃಂಗಿಮಠ ಕಳವಳ

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿಕೆಪಿಎಸ್ ನಿರ್ದೇಶಕ ಬಸವರಾಜ ಸರೂರ, ಯುವ ಮುಖಂಡ ಗಿರೀಶಗೌಡ ಪಾಟೀಲ (ಹಿರೇಮುರಾಳ), ಮುಖಂಡರಾದ ಸಿದ್ಧು ವಾಲೀಕಾರ, ಉಮೇಶ ಬಿರಾದಾರ ಮೊದಲಾದವರು ಇದ್ದರು.

ವರದಿ : ಯೂನುಸ್ ಮೂಲಿಮನಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!