- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯವಿವಿಧ ರಾಜ್ಯಗಳಿಗೆ 444ಕ್ಕೂ ಅಧಿಕ ಟ್ಯಾಂಕರುಗಳ ಮೂಲಕ ಆಮ್ಲಜನಕ ವಿತರಣೆ

ವಿವಿಧ ರಾಜ್ಯಗಳಿಗೆ 444ಕ್ಕೂ ಅಧಿಕ ಟ್ಯಾಂಕರುಗಳ ಮೂಲಕ ಆಮ್ಲಜನಕ ವಿತರಣೆ

ನವದೆಹಲಿ : ಎಲ್ಲಾ ಅಡೆ ತಡೆಗಳನ್ನು ಮೀರಿ ಮತ್ತು ಹೊಸ ಪರಿಹಾರಗಳನ್ನು ಅನ್ವೇಷಿಸಿ ಭಾರತೀಯ ರೈಲ್ವೇಯು ದ್ರವೀಕೃತ ಆಮ್ಲಜನಕವನ್ನು (ಎಲ್.ಎಂ.ಒ.) ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಸುವ ಮೂಲಕ ಪರಿಹಾರ ಒದಗಿಸುವ ತನ್ನ ಪ್ರಯಾಣವನ್ನು ಮುಂದುವರೆಸಿದೆ. ಇದುವೆರೆಗೆ ಭಾರತೀಯ ರೈಲ್ವೇಯು ಸುಮಾರು 7115 ಎಂ.ಟಿ.ಯಷ್ಟು ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ 444ಕ್ಕೂ ಅಧಿಕ ಟ್ಯಾಂಕರುಗಳ ಮೂಲಕ ವಿತರಿಸಲಿವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ನಿನ್ನೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ದೇಶಕ್ಕೆ ಸುಮಾರು 800 ಎಂ.ಟಿ.ಯಷ್ಟು ಎಲ್.ಎಂ.ಒ. ಒದಗಣೆಯಾಗಿದೆ. ಇದುವರೆಗೆ 115 ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಯಾನವನ್ನು ಪರ‍್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ತಂದಿವೆ. ಕೋರಿಕೆ ಸಲ್ಲಿಸಿರುವ ರಾಜ್ಯಗಳಿಗೆ ಸಾಧ್ಯ ಇರುವ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಧ್ಯ ಇರುವಷ್ಟು ಪ್ರಮಾಣದಲ್ಲಿ ಎಲ್.ಎಂ.ಒ.ವನ್ನು ಪೂರೈಕೆ ಮಾಡುವುದು ಭಾರತೀಯ ರೈಲ್ವೇಯ ಇರಾದೆಯಾಗಿದೆ.

ಈ ಪತ್ರಿಕಾ ಹೇಳಿಕೆಯವರೆಗಿನ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 407 ಎಂ.ಟಿ.ಯಷ್ಟು ದ್ರವೀಕೃತ ಆಮ್ಲಜನಕವನ್ನು ಇಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ 361 ಎಂ.ಟಿ., ರ‍್ಯಾಣಾದಲ್ಲಿ 1135 ಎಂ.ಟಿ, ತೆಲಂಗಾಣದಲ್ಲಿ 188 ಎಂ.ಟಿ., ರಾಜಸ್ಥಾನದಲ್ಲಿ 72 ಎಂ.ಟಿ., ರ‍್ನಾಟಕದಲ್ಲಿ 120 ಎಂ.ಟಿ. ಮತ್ತು ದಿಲ್ಲಿಯಲ್ಲಿ 2748 ಎಂ.ಟಿ.ಗೂ ಅಧಿಕ ಪ್ರಮಾಣದ ದ್ರವೀಕೃತ ಆಮ್ಲಜನಕವನ್ನು ಪೂರೈಸಲಾಗಿದೆ.

ತಮಿಳುನಾಡು ತನ್ನ ಮೊದಲ ಆಮ್ಲಜನಕ ಎಕ್ಸ್ ಪ್ರೆಸ್ ನ್ನು ಇಂದು ತಡರಾತ್ರಿ ಬರಮಾಡಿಕೊಳ್ಳಲಿದೆ. ದರ‍್ಗಾಪುರದಿಂದ 80 ಎಂ.ಟಿ. ಯಷ್ಟು ಎಲ್.ಎಂ.ಒ. ತಮಿಳುನಾಡಿಗೆ ಬರಲಿದೆ. ಆಮ್ಲಜನಕ ಎಕ್ಸ್ ಪ್ರೆಸ್ ಇದುವರೆಗೆ ಎನ್.ಸಿ.ಆರ್. ವಲಯಕ್ಕೆ ಮುಂದಿನ ವಿತರಣೆಗಾಗಿ 3900 ಎಂ.ಟಿ.ಯಷ್ಟು ದ್ರವೀಕೃತ ಎಲ್.ಎಂ.ಒ.ವನ್ನು ಪ್ಪೂರೈಕೆ ಮಾಡಿದೆ.

ಹೊಸ ಆಮ್ಲಜನಕ ಎಕ್ಸ್ ಪ್ರೆಸ್ ಗಳನ್ನು ಓಡಿಸುವುದು ಬಹಳ ಚಲನಶೀಲತೆಯ ಕೆಲಸವಾಗಿದೆ. ಮತ್ತು ಅಂಕಿ ಅಂಶಗಳು ಎಲ್ಲಾ ಸಂರ‍್ಭಗಳಲ್ಲಿಯು ಸಕಾಲಿಕಗೊಳ್ಳುತ್ತಿರುತ್ತವೆ. ಇನ್ನಷ್ಟು ಆಮ್ಲಜನಕ ತುಂಬಿದ ರೈಲುಗಳು ಗುರುವಾರ ರಾತ್ರಿ ತಮ್ಮ ಪ್ರಯಾಣ ಆರಂಭಿಸಲಿವೆ ಪ್ರಕಟಣೆಗೆ ತಿಳಿಸಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!