- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಎಬಿವಿಪಿ ವತಿಯಿಂದ ಪ್ರತಿಭಟನೆ

ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಎಬಿವಿಪಿ ವತಿಯಿಂದ ಪ್ರತಿಭಟನೆ

ಬಸವನಬಾಗೇವಾಡಿ: ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕರೆಯ ಮೇರೆಗೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರ ಘಟಕದ ಕಾರ್ಯಕರ್ತರು, ಸರ್ಕಾರಿ ಪಿಯು ಕಾಲೇಜ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ ಎಂ.ಎನ್.ಬಳಿಗಾರ ಮೂಲಕ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

MUST WATCH – ನಿಜಾಮ್ ಷಾನನ್ನು ಹೆಡೆಮುರಿಕಟ್ಟಿ, ವಿಜಯನಗರ ಸಾಮ್ರಾಜ್ಯ ರಕ್ಷಿಸಿದ ಹಂಡೆ ಹನುಮಪ್ಪನಾಯಕ

 ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಸಂತೋಷ ಪಟೇದ ಮಾತನಾಡಿ, ಭೌತಿಕ ತರಗತಿಗಳು ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು ಉದ್ಭವಿಸುತ್ತಿರುವುದು ಶೋಚನೀಯ ಸಂಗತಿ. ಲಾಕ್‌ಡೌನ್ ಕಾರಣಕ್ಕೆ ಸ್ಥಗಿತಗೊಂಡಿರುವ ಬಸ್ ಸೇವೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲ ಗ್ರಾಮಗಳಿಗೂ ಸೇವೆ ಪುನರಾಂಭಿಸಬೇಕು, ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಅರ್ಜಿಸಲ್ಲಿಸಿದರು ಸಹಿತ ಸಿಬ್ಬಂದಿಗಳ ಕೊರತೆಯಿಂದ ತಡವಾಗಿ ಬಸ್ ಪಾಸ್ ದೊರೆಯುತ್ತಿದೆ ಈ ಸಮಸ್ಯೆ ಸರಿಪಡಿಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತಕ್ಷಣ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.

 ಅಲ್ಲದೆ ಡಿಪ್ಲೋಮಾ, ಇಂಜನಿಯರಿಂಗ್, ಸ್ನಾತಕೋತರ, ಪಿಎಚ್‌ಡಿ, ಪ.ಜಾತಿ, ಪ.ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ಪಡೆಯದೇ ಪರದಾಡುತ್ತಿದ್ದಾರೆ, ರಾಜ್ಯ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾಸಿರಿ ಶಿಷ್ಯವೇತನ ಸೇರಿದಂತೆ ಎಲ್ಲಾ ವಿದ್ಯಾರ್ಥಿವೇತನ ತಕ್ಷಣ ಬಿಡುಗಡೆಗೊಳಿಸಬೇಕು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿವೇತನ ಮೊತ್ತ ಹೆಚ್ಚಿಸಬೇಕು, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಹಾಸ್ಟೇಲ್‌ಗಳಿಗೆ ಅವಲಂಭೀತರಾಗಿದ್ದು ವಸತಿ ನಿಲಯಗಳ ಆಯ್ಕೆ ಪ್ರಕ್ರೀಯೆ ಮುಗಿಯದೇ ದಿನನಿತ್ಯ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಸರಕಾರ ತಕ್ಷಣ ಸಂಬAಧಪಟ್ಟ ಅಧಿಕಾರಿಗಳಿಗೆ ವಸತಿ ನಿಲಯಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ಕಟ್ಟಿದರ ಗೋಳಗುಮ್ಮಟ, ಇಲ್ಲಂದ್ರ ಬಾರಾಕಮಾನ. ಎಚ್ಚರಿಸಿದ ಯತ್ನಾಳ್

 ಈ ಸಂದರ್ಭದಲ್ಲಿ ತಾಲೂಕಾ ಸಂಚಾಲಕ ಅಯ್ಯಪ್ಪ ಕಡ್ಲಿಮಟ್ಟಿ, ಭೀಮು ಮುಳವಾಡ, ಮುರಘೇಂದ್ರ, ಸಿದ್ದು ಜೋಗಿ, ಶಾಹೀದ ಡೋಣೂರ, ಸಂಗನಗೌಡ ಬಿರಾದಾರ, ಬಸು ಮೇಟಿ, ಆಕಾಶ ಜೋಗಿ, ಆಕಾಶ ಚಲವಾದಿ, ಸುರೇಶ ಬಾಗೇವಾಡಿ, ಪ್ರಜ್ವಲ್ ಚಲವಾದಿ, ಕೌಶಲ್ಯ ಪತ್ತಾರ, ಕವಿತಾ ಸಂಗಮ, ಪಲ್ಲವಿ ಗೊಳಸಂಗಿ, ಅಕ್ಷತಾ ನಾಗರಾಳ, ನಿವೇದಿತಾ ದೊಡಮನಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!