- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಕಲಚೇತನರ ಬದುಕಿಗೆ ಆಸರೆಯಾದ ಅಜೀಂ ಪ್ರೇಮಜೀ ಫೌಂಡೇಶನ್

ವಿಕಲಚೇತನರ ಬದುಕಿಗೆ ಆಸರೆಯಾದ ಅಜೀಂ ಪ್ರೇಮಜೀ ಫೌಂಡೇಶನ್

ಬಸವನಬಾಗೇವಾಡಿ : ಸ್ಥಳೀಯ ತಾಪಂ ಆವರಣದಲ್ಲಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಆರ್‍ಪಿಡಿ ಸದಸ್ಯರ ನೇತೃತ್ವದಲ್ಲಿ ಗುರುವಾರ 21ಜನ ವಿಶಿಷ್ಟಚೇತನರಿಗೆ ಅಜೀಂ ಪ್ರೇಮಜೀ ಫೌಂಡೇಶನ್ ಅವರು ನೀಡಿದ ಆಹಾರದ ದಿನಸಿ ಪೊಟ್ಟಣವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತಿಯ ಎಂ.ಆರ್.ಡಬ್ಲ್ಯೂ ಮಲ್ಲಿಕಾರ್ಜುನ ಬಿರಾದಾರ, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ರಾಜ್ಯಾಧ್ಯಕ್ಷೆ ಸಬೀಯಾಬೇಗಂ ಮರ್ತುರ ಮಾತನಾಡಿ, ಕೊರೋನಾದಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಶಿಷ್ಟಚೇತನರು ಸಂಕಷ್ಟಕ್ಕೆ ಸಿಲುಕಿ ನಿತ್ಯ ಜೀವನ ಸಾಗಿಸಲು ಪರದಾಡುವಂತಾಗಿದೆ, ಇತಂಹ ಪರಿಸ್ಥಿತಿಯಲ್ಲಿ ಜಿಲ್ಲೆಯದ್ಯಾಂತ ವಿಕಲಚೇತನರನ್ನು ಗುರುತಿಸಿ ಅವರಿಗೆ ಅಕ್ಕಿ, ಸಕ್ಕರಿ, ಚಹಾಪುಡಿ, ಗೋಧಿಹಿಟ್ಟು, ಅಡುಗೆಎಣ್ಣೆ ಸೇರಿದಂತೆ ಮಸಾಲ ಪದಾರ್ಥವಿರುವ ದಿನಸಿ ಕಿಟ್‍ಗಳನ್ನು ನೀಡಿ ವಿಶಿಷ್ಟಚೇತನರಿಗೆ ಅಜೀಂ ಪ್ರೇಮಜೀ ಫೌಂಡೇಶನ್‍ದವರು ಆಸರೆಯಾಗಿ ನಿಂತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್‍ಪಿಡಿ ತಾಲೂಕಾ ಉಪಾಧ್ಯಕ್ಷ ಪ್ರಕಾಶ ಸುಂಕದ, ಯಲ್ಲಮ್ಮ ಮುಳವಾಡ, ಮಲ್ಲಮ್ಮ ಪಡಸಲಗಿ ಸೇರಿದಂತೆ ಇತರರು ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!