- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕವಾಸ್ತವಿಕ ನೆಲೆಯಲ್ಲಿ ಮೇಕೆದಾಟು ಯೋಜನೆ ಮಾಡಲಿ. ಸಿಟಿ ರವಿ ಸಲಹೆ

ವಾಸ್ತವಿಕ ನೆಲೆಯಲ್ಲಿ ಮೇಕೆದಾಟು ಯೋಜನೆ ಮಾಡಲಿ. ಸಿಟಿ ರವಿ ಸಲಹೆ

ಚಿಕ್ಕಮಗಳೂರು : ಮೇಕೆದಾಟು ಯೋಜನೆ ವಿಚಾರವಾಗಿ ಅಣ್ಣಾಮಲೈ ಉಪವಾಸ ಮಾಡುವ ಹೇಳಿಕೆ ನೀಡಿರುವ ಹಿನ್ನೆಲೆ, ಬೆಂಗಳೂರಿನಲ್ಲಿ 30ರಷ್ಟು ತಮಿಳು ನಾಡಿನವರೇ ಇದ್ದಾರೆ, ದೇಶದ ಎಲ್ಲಾ ರಾಜ್ಯದ ಜನ ಬೆಂಗಳೂರಿನಲ್ಲಿದ್ದಾರೆ ಇದನ್ನು ಅರಿತುಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಈ ಕುರಿತಾಗಿ ಮಾತನಾಡಿದ ಅವರು, ಎರಡೂ ರಾಜ್ಯಕ್ಕೂ ಅನುಕೂಲವಾಗುವಂತೆ ಮಧ್ಯಮ ಮಾರ್ಗದಲ್ಲಿ ಮೇಕೆದಾಟು ಮಾಡಬೇಕು. ಎರಡೂ ರಾಜ್ಯದ ಮುಖ್ಯಮಂತ್ರಿಗಳು ರಾಜಕಾರಣ ಮಾಡದೆ ವಾಸ್ತವಿಕ ನೆಲೆಯಲ್ಲಿ ಯೋಚನೆ ಮಾಡಲಿ ಎಂದು ಸಿ.ಟಿ.ರವಿ ಸಲಹೆ ನೀಡಿದರು.

ವಿಜಯನಗರ ಮೈಲಾರಲಿಂಗ ಭವಿಷ್ಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ ಅವರು, ಯಾರ್ಯಾರು ಮುಖ್ಯಮಂತ್ರಿಯಾಗಬೇಕು ಅಂತಾ ಆಕಾಂಕ್ಷಿ ಇರ್ತಾರೋ ಅವ್ರೆಲ್ಲ ಗಡ್ಡ ಬಿಡೋಕೆ ಪ್ರಾರಂಭಿಸಬಹುದು. ನಾನಂತೂ ಮುಖ್ಯಮಂತ್ರಿ ಆಗ್ಬೇಕು ಅಂತ ಗಡ್ಡ ಬಿಟ್ಟಿದ್ದಲ್ಲ. ಕಾಲೇಜು ದಿನಗಳಿಂದಲೂ‌ ನಿರಂತರವಾಗಿ ಗಡ್ಡ ಬಿಟ್ಟು ಕೊಂಡು ಬಂದಿದ್ದೇನೆ. ಗಡ್ಡದಾರಿ ಅಂತ ಅವ್ರು ಹೇಳಿದ್ದು ನಿಜವಾಗಿದ್ರೆ ಬಹಳ ಜನ ಗಡ್ಡ ಬಿಡಬಹುದು. ನನಗೆ ಪಕ್ಷ ನಿಷ್ಠೆ, ಶ್ರಮದ ಮೇಲೆ ನಂಬಿಕೆ ಇರೋದು, ಭಗವಂತ ಏನೇನು ಬರೆದಿದ್ದಾನೋ, ತಾಯಿಯ ಆರ್ಶಿವಾದ ಇದಿಯೋ ಗೊತ್ತಿಲ್ಲ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!