- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಲಸಿಕಾ ಅಭಿಯಾನ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಹೀಗಿದೆ

ಲಸಿಕಾ ಅಭಿಯಾನ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಹೀಗಿದೆ

ನವದೆಹಲಿ : ಭಾರತ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಒಟ್ಟಾರೆ ದೇಶದಲ್ಲಿ ಮೂರನೇ ಹಂತದ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿ ಇಂದು 19 ಕೋಟಿ (19,18,79,503) ಡೋಸ್ ಲಸಿಕೆಗಳನ್ನು ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಿಳಿದುಬಂದಿದೆ.

ಇಂದು ಬೆಳಗ್ಗೆ 7 ಗಂಟೆ ವರೆಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ 27,53,883 ಸೆಷನ್ ಗಳ ಮೂಲಕ ಒಟ್ಟು 19,18,79,503 ಡೋಸ್ ಲಸಿಕೆ ಹಾಕಲಾಗಿದೆ. ಇದರಲ್ಲಿ 97,24,339 ಎಚ್ ಸಿಡ್ಲ್ಯೂಗಳಿಗೆ ಮೊದಲನೇ ಡೋಸ್ ಮತ್ತು 66,80,968 ಎಚ್ ಸಿಡ್ಲ್ಯೂಗಳಿಗೆ ಎರಡನೇ ಡೋಸ್ ನೀಡಲಾಗಿದೆ. ಅಂತೆಯೇ 1,47,91,600 ಎಫ್ಎಲ್ ಡಬ್ಲ್ಯೂಗಳಿಗೆ (1ನೇ ಡೋಸ್), 82,85,253 ಎಫ್ಎಲ್ ಡಬ್ಲ್ಯೂಗಳಿಗೆ (2ನೇ ಡೋಸ್), 18 ರಿಂದ 44 ವಯೋಮಾನದ 86,04,498 ಫಲಾನುಭವಿಗಳಿಗೆ (ಮೊದಲ ಡೋಸ್), 45 ರಿಂದ 60 ವರ್ಷದ 5,98,35,256 (1ನೇ ಡೋಸ್) ಮತ್ತು 95,80,860 (2ನೇ ಡೋಸ್), 60 ವರ್ಷ‍್ಷ ಮೇಲ್ಪಟ್ಟ 5,62,45,627 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 1,81,31,102 ಫಲಾನುಭವಿಗಳಿಗೆ 2ನೇ ಡೋಸ್ ನೀಡಿದೆ ಎನ್ನಲಾಗಿದೆ.

ದೇಶದಲ್ಲಿ ಈವರೆಗೆ ನೀಡಿರುವ ಲಸಿಕೆಗಳ ಪೈಕಿ ಹತ್ತು ರಾಜ್ಯಗಳಲ್ಲಿ ಒಟ್ಟು ಶೇ. 66.32ರಷ್ಟು ಲಸಿಕೆ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 20.61 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಸಾಧನೆಯೊಂದಿಗೆ ಭಾರತ ಒಂದೇ ದಿನದಲ್ಲಿ ಅತ್ಯಧಿಕ ಪರೀಕ್ಷೆಗಳನ್ನು ನಡೆಸಿದ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಮತ್ತೊಂದೆಡೆ ಪ್ರತಿ ದಿನದ ಪಾಸಿಟಿವಿಟಿ ದರ ಶೇ.12.59ಕ್ಕೆ ಕುಸಿದಿದೆ.

ಸತತ 8ನೇ ದಿನವು ಪ್ರತಿ ದಿನದ ಸೋಂಕು ಪ್ರಕರಣಗಳಲ್ಲಿ ಹೊಸ ಪ್ರಕರಣಗಳಿಗಿಂತ ಚೇತರಿಕೆಯ ಪ್ರಕರಣಗಳು ಹೆಚ್ಚಾಗಿವೆ. ಕಳೆದ 24 ಗಂಟೆಗಳಲ್ಲಿ 3,57,295 ಮಂದಿ ಗುಣಮುಖರಾಗಿದ್ದಾರೆ.

ಇಂದು ಭಾರತದಲ್ಲಿ ಒಟ್ಟಾರೆ ಗುಣಮುಖರಾದವರ ಸಂಖ್ಯೆ 2,27,12,735 ತಲುಪಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಸರಾಸರಿ ಶೇ.87.25 ತಲುಪಿದೆ.

ಹೊಸದಾಗಿ ಗುಣಮುಖವಾಗಿರುವ ಪ್ರಕರಣಗಳಲ್ಲಿ ಹತ್ತು ರಾಜ್ಯಗಳಲ್ಲಿ ಶೇ.74.55ರಷ್ಟು ಜನರಿದ್ದಾರೆ.

ಮತ್ತೊಂದು ಸಕಾರಾತ್ಮಕ ಬೆಳವಣಿಗೆಯಲ್ಲಿ ಭಾರತದಲ್ಲಿ ಸತತ 5ನೇ ದಿನ 3 ಲಕ್ಷಕ್ಕಿಂತಲೂ ಕಡಿಮೆ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 2,59,551 ಹೊಸ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.76.66 ರಷ್ಟು ಪ್ರಕರಣಗಳು ಹತ್ತು ರಾಜ್ಯಗಳಲ್ಲಿ ವರದಿಯಾಗಿವೆ. ತಮಿಳುನಾಡಿನಲ್ಲಿ ಪ್ರತಿ ದಿನದ ಹೊಸ ಪ್ರಕರಣಗಳಲ್ಲಿ ಅತ್ಯಧಿಕ 35,579 ವರದಿಯಾಗಿದ್ದರೆ, ಕೇರಳದಲ್ಲಿ 30,491 ಹೊಸ ಪ್ರಕರಣ ದಾಖಲಾಗಿವೆ.

ಮತ್ತೊಂದೆಡೆ ಭಾರತದಲ್ಲಿ ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 30,27,925 ಕ್ಕೆ ಕುಸಿದಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು1,01,953 ರಷ್ಟು ಪ್ರಕರಣಗಳು ಕಡಿಮೆಯಾಗಿವೆ. ಇದೀಗ ದೇಶದಲ್ಲಿ ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇ. 11.63ರಷ್ಟಿದೆ. ಭಾರತದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ. 69.47ರಷ್ಟು ಪ್ರಕರಣ 8 ರಾಜ್ಯಗಳಲ್ಲಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!