- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕರೇಷನ್ ಕಿಟ್ ವಿತರಿಸಿ ಸಾಮಾಜಿಕ ಕಳಕಳಿ ಮೆರೆದ ಗೆಳೆಯರ ಬಳಗ

ರೇಷನ್ ಕಿಟ್ ವಿತರಿಸಿ ಸಾಮಾಜಿಕ ಕಳಕಳಿ ಮೆರೆದ ಗೆಳೆಯರ ಬಳಗ

ಬಾಗಲಕೋಟ : ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರದ ಅಡುಗೆ ಸಿಬ್ಬಂದಿಗಳಿಗೆ ಬಾಗಲಕೋಟದ ಚಿನ್ಮಯ ಹೆಬ್ಬಾಳ, ಆಕಾಶ ಹಲಕಿ, ರಜತ್ ದಾವಣಗೆರೆ ಮತ್ತು ಇಶಾನ್ ಶಿರಬೂರ ಅವರ ನೇತೃತ್ವದ ಗೆಳೆಯರ ಬಳಗ ರೇಷನ್ ಕಿಟ್ ವಿತರಿಸಿಸಲಾಯಿತು.

ಕೋವಿಡ್ ಕೇರ್ ಸೆಂಟರ್ ನಲ್ಲಿ, ಕಳೆದೊಂದು ತಿಂಗಳಿನಿಂದ ಪ್ರತಿದಿನ ಅಡುಗೆ ಸಿದ್ಧಪಡಿಸಿ ಉಣಬಡಿಸುತ್ತಿರುವ ಅಡುಗೆ ಸಿಬ್ಬಂದಿಯ ಕಾರ್ಯವನ್ನು ಪ್ರೋತ್ಸಾಹಿಸುವ ಮೂಲಕ  ಯುವ ಗೆಳೆಯರು 50 ರೇಷನ್ ಕಿಟ್‌ಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಈ ಕಿಟ್ ಗಳನ್ನು ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಹಾಗೂ ಗೆಳೆಯರ ಬಳಗದಿಂದ ರೇಷನ್ ಕಿಟ್‌ಗಳನ್ನು ವಿತರಿಸಿದರು.

 ಈ ಸಂದರ್ಭ ಬಿ.ವಿ.ವಿ.ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ವಸತಿನಿಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಬಿ.ವಿ.ವಿ.ಸಂಘದ ಸದಸ್ಯರಾದ ಅಶೋಕ ಕಲ್ಯಾಣಶೆಟ್ಟಿ ಮತ್ತು ಅಶೋಕ ರೇಣುಕಪ್ಪ, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ.ಎಸ್.ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಮತ್ತು ಡಾ.ಆಶಾಲತಾ ಮಲ್ಲಾಪೂರ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!