- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕರಾಜಕುಮಾರ ಜಿಡ್ಡಗಿಗೆ ಟಿಕೆಟ್ ನೀಡಲು ರವಿಕುಮಾರ ಗೌಡ ಆಗ್ರಹ

ರಾಜಕುಮಾರ ಜಿಡ್ಡಗಿಗೆ ಟಿಕೆಟ್ ನೀಡಲು ರವಿಕುಮಾರ ಗೌಡ ಆಗ್ರಹ

ಅಫಜಲಪುರ : ತಾಲ್ಲೂಕಿನ ಮಣ್ಣೂರ (ಕರಜಗಿ) ಜಿಲ್ಲಾ ಪಂಚಾಯತ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಪ್ರಭಲ ಆಕಾಂಕ್ಷಿ ಅಭ್ಯರ್ಥಿಯಾಗಿರುವ ರಾಜಕುಮಾರ ಜಿಡ್ಡಗಿಗೆ ಟಿಕೆಟ್ ನೀಡಬೇಕೆಂದು ಕೂಡಿಗನೂರ ಗ್ರಾಮದ ಭಾರತೀಯ ಜನತಾ ಪಕ್ಷದ ಗ್ರಾಮ ಘಟಕದ ಅಧ್ಯಕ್ಷ ರವಿಕುಮಾರ ಗೌಡ ಬಿರಾದಾರ ಆಗ್ರಹಿಸಿದ್ದಾರೆ.

ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಜನಮಾನಸದಲ್ಲಿ ಹೆಸರುವಾಸಿಯಾಗಿರುವ ರಾಜಕುಮಾರ ಜಿಡ್ಡಗಿ ಅವರು ಜನಪರ ಕಾಳಜಿ ಹೊಂದಿರುವಂತಹ ಸರಳ, ಸಜ್ಜನಿಕೆಯ ಮುಖಂಡರಾಗಿದ್ದು,  ಅವರಿಗೆ ಪಕ್ಷದ ವರಿಷ್ಠರು ಟಿಕೆಟ್ ನೀಡುವ ಮೂಲಕ ಅವರ ಗೆಲುವಿಗೆ ಸಹಕರಿಸಬೇಕು ಎಂದ ರವಿಕುಮಾರಗೌಡ, ಒಂದೊಮ್ಮೆ ಪಕ್ಷ ಟಿಕೆಟ್ ನೀಡದೇ ಇದ್ದರೆ ಮಣ್ಣೂರ (ಕರಜಗಿ) ಜಿಲ್ಲಾ ಪಂಚಾಯತಿ ಸ್ಥಾನ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆ ಆಗಲಿದೆ ಎಂದು ಹೇಳಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!