- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯರಂಭಾಪುರ ಗ್ರಾಮದಲ್ಲಿ ವಿಭಿನ್ನವಾಗಿ ಬಸವ ಜಯಂತಿ ಆಚರಣೆ

ರಂಭಾಪುರ ಗ್ರಾಮದಲ್ಲಿ ವಿಭಿನ್ನವಾಗಿ ಬಸವ ಜಯಂತಿ ಆಚರಣೆ

ವಿಜಯಪುರ : ಇಂದು ನಾಡಿನಾದ್ಯಂತ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಲಾಗುತ್ತಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಣೆ ಮಾಡಿದ್ದು, ವಿಜಯಪುರ ತಾಲೂಕಿನ ರಂಭಾಪುರ ಗ್ರಾಮದಲ್ಲಿ ಬಸವ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ಮಹಾಮಾರಿ  ಕೊರೋನಾ ನಿಯಂತ್ರಿಸಲು ಬಸವೇಶ್ವರ ಜಯಂತಿ ನಿಮಿತ್ಯ ರಂಭಾಪುರ ಗ್ರಾಮದಲ್ಲಿ ಬಸವೇಶ್ವರ ಗ್ರೂಪ್ ವತಿಯಿಂದ  ಇಡೀ ಗ್ರಾಮಕ್ಕೆ  ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು.

ಪ್ರತಿವರ್ಷ ಬಸವ ಜಯಂತಿಯಂದು ಜಾತ್ರೆ ಮಾಡಲಾಗುತ್ತಿತ್ತು. ಆದರೆ ಈ ಸಲ ಕೊರೋನಾ ಹಿನ್ನೆಲೆಯಲ್ಲಿ ಇಡೀ ರಾಜ್ಯ  ಲಾಕ್ ಡೌನ್ ಆಗಿರುವ ಕಾರಣ ಬಸವಣ್ಣನ  ಜಯಂತಿಯ ಜಾತ್ರೆಯ ಬದಲು ಇಡೀ ಗ್ರಾಮದ ತುಂಬೆಲ್ಲ ಬಸವೇಶ್ವರ ಗ್ರೂಪ್ ವತಿಯಿಂದ ಸ್ಯಾನಿಟೈಸರ್  ಸಿಂಪರಣೆ ಮಾಡಲಾಯಿತು.

ಕೊರೋನಾ ಮಹಾಮಾರಿ ಇಂದಾಗಿ ಜಾತ್ರೆ ಆಚರಿಸಲು ಆಗುತ್ತಿಲ್ಲ, ಆದ ಕಾರಣ ಜಾತ್ರೆಗೆ ಮಾಡುವ ಖರ್ಚನ್ನು ಬಳಸಿ ಇಡೀ ಗ್ರಾಮ ತುಂಬೆಲ್ಲ  ಟ್ರ್ಯಾಕ್ಟರ್ ಮೂಲಕ ಸ್ಯಾನಿಟೈಜರ್ ಸಿಂಪರಣೆ ಮಾಡಲಾಯಿತು.  ಬಸವೇಶ್ವರ ಗ್ರೂಪಿನ ಯುವಕರು ಸ್ವತಃ ತಾವೇ ಖರ್ಚು ಮಾಡಿ ಗ್ರಾಮದ ತುಂಬ ಸ್ಯಾನಿಟೈಜರ್ ಸಿಂಪಡಣೆ ಮಾಡಿದರು.


https://www.youtube.com/watch?v=7p_LEzO5scw

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!