- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯರಂಜಾನ -ಬಸವ ಜಯಂತಿ ಏಕಕಲಾಕ್ಕೆ ಆಚರಣೆ. ಸೌಹಾರ್ದತೆಯ ಸಂಕೇತ

ರಂಜಾನ -ಬಸವ ಜಯಂತಿ ಏಕಕಲಾಕ್ಕೆ ಆಚರಣೆ. ಸೌಹಾರ್ದತೆಯ ಸಂಕೇತ

ಮುದ್ದೇಬಿಹಾಳ : ಎಲ್ಲ ಜಾತಿ ಧರ್ಮಗಳು ಒಂದೆ ಎನ್ನುವ ವಿಶ್ವಗುರು ಬಸವಣ್ಣವರ ಆಸೆಯಂತೆ ರಂಜಾನ ಮತ್ತು ಬಸವ ಜಯಂತಿಯು ಒಂದೆ ದಿನ, ಏಕಕಲಾಕ್ಕೆ ಆಚರಣೆಗೆ ಬಂದಿರುವುದು ಸೌಹಾರ್ದತೆಯ ಸಂಕೇತವಾಗಿದೆ ಎಂದು ಎಪಿಎಂಸಿ ನಿರ್ಧೇಶಕ ವಾಯ್ ಎಚ್ ವಿಜಯಕರ ಹೇಳಿದರು.

ಪಟ್ಟಣದ ಶಾರದಾ ಸ್ಕೂಲ್ ನಲ್ಲಿ ಯುವ ಮುಖಂಡ ಕಾಮರಾಜ ಬಿರಾದಾರ ನೇತೃತ್ವದಲ್ಲಿ ಸ್ನೇಹಿತರ ಬಳಗದಿಂದ ಪ್ರಂಟ್ ಲೈನ ಕೋರೊನಾ ವಾರಿಯರ್ಸಗಳಾದ ಪೋಲಿಸ್ ಇಲಾಖೆ, ಪುರಸಭೆಯ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ವಿಶೇಷ ಸನ್ಮಾನಿಸಿ ಅವರು ಮಾತನಾಡಿದರು.

ದೇಶದಲ್ಲೇಡೆ ಕೋರೊನಾ ಅಟ್ಟಹಾಸ ಮೆರೆಯುತ್ತಿದೆ, ಸಾರ್ವಜನಿಕರು ನೆಮ್ಮದಿ ಕಳೆದುಕೊಂಡಿದ್ದಾರೆ ಇಂಹತ ಸಂದರ್ಭದಲ್ಲಿ ತಮ್ಮ ಕುಟುಂಭವನ್ನು ಲೆಕ್ಕಿಸದೇ ಪ್ರಂಟ್ ಲೈನಾಗಿ ನಿಂತು ಮಹತ್ಕಾರ್ಯದ ಮೂಲಕ ಪ್ರಾಮಾಣಿಕ ಕೊರೊನಾ ವಾರಿಯಸ್ ಗಳಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿ, ಗೌರಸುತ್ತಿರುವ ಸ್ನೇಹಿತರ ಬಳಗದ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.

ಈ ವೇಳೆ ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ,  ಯುವ ಮುಖಂಡ ಕಾಮರಾಜ ಬಿರಾದಾರ, ಪತ್ರಕರ್ತರಾದ ಪುಂಡಲೀಕ ಮುರಾಳ, ಶಂಕರ ಹೆಬ್ಬಾಳ, ನಾರಾಯಣ ಮಾಯಾಚಾರಿ, ಪರುಶುರಾಮ ಕೊಣ್ಣೂರು ಮಾತನಾಡಿದರು.

ಗೆಳೆಯರ ಬಳಗದ ಮುಖಂಡರಾದ ಶ್ರೀಶೈಲ ಪೂಜಾರಿ, ಸದು ಮಠ, ಮುತ್ತು ರಾಯಗೊಂಡ, ಪತ್ರಕರ್ತರಾದ ಗುರುನಾಥ ಕತ್ತಿ, ಲಾಡ್ಲೇಮಶ್ಯಾಕ ನದಾಫ, ಅನೀಲ ಹಡಪದ, ಕೃಷ್ಣಾ ಕುಂಬಾರ, ಸಿದ್ದು ಚಲವಾದಿ, ಚೇತನ ಕೆಂದೂಳಿ, ಶಿವು ಶಾರದಳ್ಳಿ, ಗುಲಾಶಮ ದಫೇದಾರ, ಸಾಗರ ಉಕ್ಕಲಿ, ಚೇತನ ಶಿವಶಿಂಪಿ, ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ, ಪೋಲಿಸ್ ಸಿಬ್ಬಂದಿಗಳಾದ ಸಂಗನಗೌಡ ಬಿರಾದಾರ, ಎಸ್ ಜಿ ಬನ್ನೇಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!