- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಯುವತಿ ಕಾಣೆ. ಪತ್ತೆಗೆ ಮನವಿ

ಯುವತಿ ಕಾಣೆ. ಪತ್ತೆಗೆ ಮನವಿ

ಬಸವನಬಾಗೇವಾಡಿ : ತಾಲೂಕಿನ ಕರಿಭಂಟನಾಳ ತಾಂಡಾದ ಸುರೇಖಾ ಗಂ. ಚಿನ್ನು ಲಮಾಣಿ (20) ಇವಳು ಜೂನ 3 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಿಂದ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ನರಸಲಗಿ ತಾಂಡಾದ ನಿವಾಸಿ, ಕಾಣೆಯಾದ ಯುವತಿಯ ತಂದೆ ಸುರೇಶ ಹಣಮಂತ ರಾಠೋಡ ಜೂ.12 ರಂದು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾದ ಯುವತಿ 5 ಪೂಟ ಎತ್ತರ, ಗುಂಡು ಮುಖ, ಬಿಳಿಯ ಬಣ್ಣ ಹೊಂದಿದ್ದಾಳೆ. ಲಂಬಾಣಿ, ಕನ್ನಡ, ಹಿಂದಿ ಭಾಷೆ ಮಾತನಾಡುವ ಈ ಯುವತಿಯ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕರೆ, ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾಹಿತಿ ನೀಡಬಹುದಾಗಿದೆ.  

08352-250844, 08358-245233, 08358-245244, 08358-245333 ಮಾಹಿತಿ ತಿಳಿದರೆ ಈ ದೂರವಾಣಿ ಸಂಖ್ಯೆಗಳಿಗೆ ತಿಳಿಸಬೇಕೆಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!