- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯುವಕರಿಗೆ ಪರಿಸರ ಆಕರ್ಷಣೆ..! ವಿಜಯಪುರದ ಅರಣ್ಯದಲ್ಲಿ ಹುಣ್ಣಿಮೆಯ ರಾತ್ರಿ ಆಯೋಜನೆ

ಯುವಕರಿಗೆ ಪರಿಸರ ಆಕರ್ಷಣೆ..! ವಿಜಯಪುರದ ಅರಣ್ಯದಲ್ಲಿ ಹುಣ್ಣಿಮೆಯ ರಾತ್ರಿ ಆಯೋಜನೆ

ವಿಜಯಪುರ : ಪರಿಸರ ವ್ಯವಸ್ಥೆ ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಯುವಕರನ್ನು ಹೆಚ್ಚು ಪರಿಸರದತ್ತ ಆಕರ್ಷಿಸಲು, ಪರಿಸರದಲ್ಲಿಯೇ ವಾಸ್ತವ್ಯ ಕಾರ್ಯಕ್ರಮವನ್ನು ವಿಜಯಪುರದ ಭೂತನಾಳ ಕೆರೆ ಕರಾಡದೊಡ್ಡಿ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ಹುಣ್ಣಿಮೆಯ ರಾತ್ರಿ ದಿ.24 ಶನಿವಾರ ಸಂಜೆಯಿಂದ ರವಿವಾರ ಬೆಳಗಿನ 11ಗಂ. ವರೆಗೆ ನಡೆಯಲಿದೆ ಎಂದು ಆಯೋಜಕ ಕೃಷಿ ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ತಿಳಿಸಿದ್ದಾರೆ.

ಭಾರತೀಯ ಭವ್ಯ ಪರಂಪರೆ ಅರಿತುಕೊಳ್ಳಿ – ಶಿದ್ದೇಶ್ವರ ಶ್ರೀ

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನಿಸರ್ಗದೊಂದಿಗೆ ಸಮಯ ಕಳೆಯುವ ಕ್ಯಾಂಪಿಂಗ್ ಕಲ್ಚರ್ ಇದೆ. ಭಾರತದಲ್ಲಿ ಈ ಸಂಸ್ಕೃತಿ ಕಡಿಮೆ ಇದೆ. ಪರಿಸರ ರಕ್ಷಣೆಗೆ ಮುಂದಾಗಬೇಕಿರುವ ಯುವಕರು ಟೆಂಟ್ ಗಳನ್ನು ಹಾಕಿ, ಆ ಪ್ರಕೃತಿಯಲ್ಲಿ ಒಂದು ದಿನ ಕಳೆದರೆ ಸ್ವಾಭಾವಿಕವಾಗಿ ಅವರಲ್ಲಿ ಆ ಪರಿಸರದ ಕುರಿತು ಆಸಕ್ತಿ, ಪ್ರೀತಿ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ವಿಜಯಪುರದಲ್ಲಿ ಕೋಟಿವೃಕ್ಷ ಅಭಿಯಾನ ಸಹಯೋಗದಲ್ಲಿ ಈ ಪರಿಸರ ವಾಸ್ತವ್ಯವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತರು ತಮ್ಮ ಟೆಂಟ್‍ನೊಂದಿಗೆ ಭಾಗವಹಿಸುತ್ತಾರೆ.

ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು, ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ರವರು ರವಿವಾರ ಬೆಳಿಗ್ಗೆ ಭೂತನಾಳ ಕೆರೆ ಆವರಣಕ್ಕೆ ಭೇಟಿ ನೀಡಿ, ಪರಿಸರ ಆಸಕ್ತರೊಂದಿಗೆ ಮಾತುಕತೆ ಮಾಡಲು ವಿನಂತಿಸಲಾಗಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!