- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳ ಹಿಂದುತ್ವವಾದಿ ಆದರೆ...! ಈಶ್ವರಪ್ಪ ಹೇಳಿದ್ದು ಹೀಗೆ…

ಯತ್ನಾಳ ಹಿಂದುತ್ವವಾದಿ ಆದರೆ…! ಈಶ್ವರಪ್ಪ ಹೇಳಿದ್ದು ಹೀಗೆ…

ವಿಜಯಪುರ : ಭಾರತೀಯ ಜನತಾ ಪಾರ್ಟಿಯ ಪೂರ್ಣ ಬಹುಮತ ತರುವದು ನಮ್ಮ ಗುರಿ. ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ‌ ಸಂಘಟನೆಯ ಕಟ್ಟುವದರಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.

ವಿಜಯಪುರ ನಗರಕ್ಕೆ ರವಿವಾರ ಆಗಮಿಸಿದ್ದ ಕೆ.ಎಸ್.ಈಶ್ವರಪ್ಪನವರು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳಿತ್ತು. ಆದರೆ ಈಗ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮರ್ಥವಾಗಿ ಪಕ್ಷ ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಆ ಕೆಲಸ ಮಾಡುವದು ನಮ್ಮ ಕರ್ತವ್ಯವಾಗಿದೆ. ಈ ಹಿಂದೆಯೂ ನಾನು ಸಚಿವನಾಗಿದ್ದ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಜವಾಬ್ದಾರಿ ವಹಿಸಲು ಹೇಳಿದರು ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ, ನಾನು ಸಿಎಂ, ನಾನು ಸಿಎಂ ಎಂದು ಸ್ಥಾನಕ್ಕಾಗಿ ಕಾಂಗ್ರೇಸ್ ನಲ್ಲಿ ಮಾತನಾಡುತ್ತಿದ್ದಾರೆ ನಮ್ಮಲ್ಲಿ ಇಲ್ಲ ಎಂದು ಸಮರ್ಥಿಸಿಕೊಂಡರು.

ಮಾತು ಮುಂದುವರಿಸಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿ ಹೇಳಿಕೆ ಕೊಟ್ಟು ಹಾಳಾಗುತ್ತಿದ್ದಾರೆ. ಅವರಿಗೆ ಕಳೆದ ಬಾರಿ ನಾನೂ ಕೂಡಾ ಹೇಳಿದ್ದೆ. ಅವರು ನನಗೆ ಆತ್ಮೀಯ ಸ್ನೇಹಿತ ಮತ್ತು ಹಿಂದುತ್ವವಾದಿ ಆಗಿರುವುದು ಹೆಮ್ಮೆಯ ವಿಷಯ. ಅವರ ಬಗ್ಗೆ ನನಗೆ ಖುಷಿಯಿದೆ, ಆದರೆ ಬಹಿರಂಗ ಹೇಳಿಕೆಗಳಿಂದ ಹಾಳಾಗುತ್ತಿದ್ದಾರೆ ಅಷ್ಟೇ. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ನನಗೇನು ಅನಿಸುವದಿಲ್ಲ. ನಾಲ್ಕು ಗೋಡೆಗಳ ಮದ್ಯ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮತ್ರು ಈ ಕುರಿತಾಗಿ ನಾನು ಯತ್ನಾಳ ಅವರೊಂದಿಗೆ ಮಾತನಾಡುವೆ ಎಂದು ಹೇಳಿದರು.

ಮಠಾದೀಪತಿಗಳು ಅವರ ಶಿಷ್ಯಂದಿರ ಬಗ್ಗೆ ಪ್ರೀತಿಯಿಂದ ಕೇಳುವದು ತಪ್ಪಲ್ಲ. ಆದರೆ ಬೆದರಿಕೆ ಹಾಕುವದು ತಪ್ಪು. ಬೆದರಿಕೆ ಹಾಕುವದು ಬಿಜೆಪಿ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗಲ್ಲ. ಯಡಿಯೂರಪ್ಪನವರಿಗೆ ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶ ಆಗುತ್ತದೆ ಎಂದು ಸ್ವಾಮಿಗಳು ಹೇಳುವದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಯಾವ ಸ್ವಾಮಿಗಳು ಏನೂ ಬೇಕಾದರೂ, ಯಾರ ಬಗ್ಗೆಯೂ ಪ್ರೀತಿಯಿಂದ ಹೇಳಬಹುದು ಎಂದರು.

ಇನ್ನೂ ರಾಯಣ್ಣ ಬ್ರಿಗೇಡ್ ಮುಂದೆ ವರೆಸುವ ವಿಚಾರವಾಗಿ ಮಾತನಾಡಿ ಅವರು, ರಾಯಣ್ಣ ಬ್ರಿಗೇಡ್ ಕ್ಲೋಸ್ ಮಾಡಿ ಎಂದು ಅಮೀತಾ ಶಾ ಅವರು ಕರೆದು ಬಂದ್ ಮಾಡಿ ಎಂದು ಹೇಳಿದ್ದಾರೆ. ಅದನ್ನು ನಾನು ಸಂಪೂರ್ಣವಾಗಿ ಕ್ಲೋಸ್ ಮಾಡಿದ್ದೇನೆ. ಅದನ್ನು ಯಾರು ಮುಂದೆ ವರೆಸುತ್ತಾರೋ ಗೊತ್ತಿಲ್ಲ. ನಾನಂತೂ ಆ ಕಡೆ ಹೋಗುವದಿಲ್ಲ ಎಂದು ಹೇಳಿಕೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!