- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳ್ ಹೇಳಿಕೆಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಕಿಡಿ

ಯತ್ನಾಳ್ ಹೇಳಿಕೆಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಕಿಡಿ

ತುಮಕೂರು :  ಯತ್ನಾಳ್ ಗೆ ಬುದ್ದಿ ಭ್ರಮಣೆಯಾಗಿದೆ, ಯಡಿಯೂರಪ್ಪರ ಬಗ್ಗೆ ಪದೇ ಪದೇ ಅವಹೇಳನಕಾರಿಯಾಗಿ ಮಾತನಾಡುತ್ತಾರೆ, ಅದು ಅವರಿಗೆ ಶೋಭೆ, ಗೌರವ ತರುವಂಥದಲ್ಲ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಯ ಬಗ್ಗೆ ಮಾತನಾಡಿದ ಶಾಸಕ ಜ್ಯೋತಿಗಣೇಶ್, ೨೦೧೬-೨೦೧೭ ರಲ್ಲಿ ಇದೇ ಯತ್ನಾಳ್ ಯಡಿಯೂರಪ್ಪ ಇಲ್ಲದೇ ಇದ್ದರೆ, ಬಿಜೆಪಿಗೆ ೩ ಸ್ಥಾನನೂ ಬರೋದಿಲ್ಲ ಎಂದು ಹೇಳಿದ್ದರು. ಈಗ ಅವರ ವಿರುದ್ಧ ಮಾತನಾಡುತ್ತಾರೆ, ಯತ್ನಾಳ್ ಹೇಳಿಕೆಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ ಎಂದು ಕಿಡಿ ಕಾರಿದರು.

ಯಡಿಯೂರಪ್ಪನವರು ಪಕ್ಷಕ್ಕಾಗಿ ಮತ್ತೇ ದುಡಿಯುತ್ತಾರೆ, ರಾಜ್ಯಾದ್ಯಂತ ಸುತ್ತಾಡಿ ಪಕ್ಷವನ್ನು ಬಲ ಪಡಿಸುವ ಕಾರ್ಯ ಮಾಡ್ತಾರೆ. ಮುಂಬರುವ ದಿನಗಳಲ್ಲಿ ಜಿ.ಪಂ ತಾ.ಪಂ ಚುನಾವಣೆ ಬರುತ್ತಿರುವ ಕಾರಣ ರಾಜ್ಯಾದ್ಯಕ್ಷರಾದ ನಳಿನಕುಮಾರ್ ಕಟೀಲರವರ ಜೊತೆ ಬಿಎಸ್‌ವೈ ರಾಜ್ಯ ಪ್ರವಾಸ ಮಾಡ್ತಾರೆ. ಬಿಎಸ್ವೈ ಸುಮ್ಮನೆ ಕೈ ಕಟ್ಟಿ ಕೂರುವ ನಾಯಕ ಅಲ್ಲ, ಮಾಸ್ ಲೀಡರ್ ಅಂದ್ರೆ ಏನು ಅಂತ ತೋರಿಸಿದವರು ಎಂದು ಯತ್ನಾಳ್ ಗೆ ಟಾಂಗ್ ನೀಡಿದರು.

ಇನ್ನು ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಆದ್ಯತೆ ವಿಚಾರಕ್ಕೆ ಸಂಬಂದಿಸಿಂತೆ ಮಾತನಾಡಿದ ಜ್ಯೋತಿಗಣೇಶ್ ಫಸ್ಟ್ ಟೈಂ ಗೆದ್ದವರೇ ಹೊಸ ಮುಖಗಳಲ್ಲ, ಸಾಕಷ್ಟು ಜನ ಹಿರಿಯರಿದಾರೆ. ಎಲ್ಲೋ ಒಂದು ಕಡೆ ಮಾನದಂಡ ಇರುತ್ತವೆ, ಅದರ ಮೂಲಕ ಹೊಸಬರಿಗೆ ಅವಕಾಶ ಸಿಗುತ್ತದೆ. ಮೂಲ, ವಲಸಿಗರು ಎನ್ನುವ ಪ್ರಶ್ನೆ ಯಾರು ಮಾಡಬಾರದು. ಇಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತೆ  ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!