- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳ್ ವಿರುದ್ಧ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಕ್ರೋಶ

ಯತ್ನಾಳ್ ವಿರುದ್ಧ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಕ್ರೋಶ

ವಿಜಯಪುರ : ಸ್ವಾಮೀಜಿಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವಿಚಾರವಾಗಿ ಬಿಜೆಪಿ ಮುಖಂಡರುಗಳು ಸ್ವಕ್ಷೇತ್ರದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ : ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸಂಭ್ರಮಾಚರಣೆ

ಈ ಕುರಿತಾಗಿ ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ತಲೆ ಸರಿ ಇಲ್ಲ, ಯಡಿಯೂರಪ್ಪ ಪರ ಮಾತನಾಡಿದ ಸ್ವಾಮಿಜಿಗಳ‌ ವಿರುದ್ಧ ಮಾತನಾಡುವಾಗ ಎಲ್ಲಾ ಸ್ವಾಮಿಜಿಗಳು ಎಂದು ಯತ್ನಾಳ್ ಹೇಳಿದ್ದಾರೆ. ಇದು ಮಠಾದಿಶರಿಗೆ ಮಾಡಿದ ಅವಮಾನ. ಎಲ್ಲ ಸ್ವಾಮಿಜಿಗಳು ಎಂದು ಹೇಳಬಾರದು. ಮಠಾಧೀಶರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಠಾಧೀಶರು ಹಣ ತಗೊಂಡಿದ್ದಾರೆ ಎಂದು ನಗರ ಶಾಸಕರು ಆರೋಪ ಮಾಡುವುದು ಸರಿಯಲ್ಲ, ನಗರ ಶಾಸಕರಿಗೆ ತಲೆ ಸರಿಯಿಲ್ಲ ಹಣ ಪಡೆದುಕೊಂಡ ಸ್ವಾಮೀಜಿಗಳ ಯಾರು ಎಂದು ಹೆಸರು ಹೇಳಲಿ. ಹಿಂದೂಗಳ ಭಾವನೆಗೆ ಶಾಸಕ ಯತ್ನಾಳ್ ದಕ್ಕೆ ತಂದಿದ್ದಾರೆ. ನಾನು ಹಿಂದೂ ನಾಯಕ ಎಂದು ಯತ್ನಾಳ ಬಿಂಬಿಸಿಕೊಳ್ಳುತ್ತಾರೆ, ಆದರೆ ಸ್ವಾಮಿಜಿಗಳ ವಿರುದ್ಧ ಮಾತನಾಡುತ್ತಾರೆ. ಮಠಗಳು ನಮ್ಮ ಧಾರ್ಮಿಕ ಕೇಂದ್ರಗಳು ಆದರೆ ಅಂತಹ ಕೇಂದ್ರಗಳಿಗೆ  ಧಕ್ಕೆ ತರುವಂಥ ಕೆಲಸ ನಗರ ಶಾಸಕರು ಮಾಡಿರುವುದನ್ನು ಖಂಡಿಸಿದರು.

ಯಾವ ಸ್ವಾಮೀಜಿ ಹಣ ಪಡೆದುಕೊಂಡಿದ್ದಾರೆ ಅವರ ಹೆಸರು ಬಹಿರಂಗಪಡಿಸಲಿ, ಎಲ್ಲಾ ಮಠಾಧೀಶರ ಮೇಲೆ ಆರೋಪ ಮಾಡುವುದು ಸರಿಯಲ್ಲ, ಯಡಿಯೂರಪ್ಪನ ಪರವಾಗಿ ಸ್ವಾಮೀಜಿಗಳು ನಿಂತಿದ್ದಕ್ಕೆ ಹೊಟ್ಟೆಕಿಚ್ಚಿನಿಂದ ಅವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಕಷ್ಟದ ಸಮಯದಲ್ಲಿ ಮಠಾಧೀಶರು ಸಾರ್ವಜನಿಕರೊಂದಿಗೆ ನಿಲ್ಲುತ್ತಾರೆ. ಇವರ ಹೇಳಿಕೆಯಿಂದ ಭಕ್ತರ ಭಾವನೆಗೆ ಧಕ್ಕೆಯಾಗಿದೆ ಈ ಹೇಳಿಕೆ ಸರಿಯಲ್ಲ ವಾಪಾಸ್ ಪಡೆದುಕೊಳ್ಳಬೇಕು ಎಂದು ಶಾಸಕ ಯತ್ನಾಳ್ ವಿರುದ್ಧ ಬಿಜೆಪಿ ‌ಮುಖಂಡ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!