- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳಗೆ ಜಲಸಂಪನ್ಮೂಲ ಕೊಡಿ. ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಆಗ್ರಹ

ಯತ್ನಾಳಗೆ ಜಲಸಂಪನ್ಮೂಲ ಕೊಡಿ. ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಆಗ್ರಹ

ಬಸವನಬಾಗೇವಾಡಿ : ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ಶಾಸಕ ಬಸನಗೌಡ  ಪಾಟೀಲ (ಯತ್ನಾಳ) ಅವರಿಗೆ ಸಂಪುಟದಲ್ಲಿ, ಕ್ಯಾಬಿನೆಟ್ ದರ್ಜೆಯ ಜಲಸಂಪನ್ಮೂಲ ಖಾತೆಯನ್ನು ನೀಡಬೇಕೆಂದು ತಾಲೂಕಾ ಮಂಡಲ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿಯಾದ ರಾಹುಲ ಕಲಗೊಂಡ ಬಾಜಪಾ ಹೈಕಮಾಂಡ ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳರು ಎರಡು ಬಾರಿ ಸಂಸದರಾಗಿ, ಕೇಂದ್ರ ರೇಲ್ವೆ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೊದಲು ಒಂದು ಬಾರಿ ಶಾಸಕರಾಗಿದ್ದರು. ಹಾಲಿ ವಿಜಯಪುರ ನಗರ ಶಾಸಕರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಭರವಸೆಯನ್ನು ಮೂಡಿಸಿರುವ ಪ್ರಬಲ ನಾಯಕರಾಗಿದ್ದಾರೆ. ಅಲ್ಲದೇ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಈ ಹಿಂದೆ ಹಲವಾರು ಹೋರಾಟವನ್ನೂ ನಡೆಸುವ ಮೂಲಕ ನೀರಾವರಿ ಬಗ್ಗೆ ರೈತರ ಕಷ್ಟಗಳನ್ನು  ಅರಿತುಕೊಂಡಿದ್ದಾರೆ. ಆದ್ಧರಿಂದ ಜಿಲ್ಲೆಯಲ್ಲಿಯೇ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ (ಯತ್ನಾಳ) ಅವರಿಗೆ ಸಚಿವ ಸ್ಥಾನ ನೀಡುವುದರೊಂದಿಗೆ ಜಿಲ್ಲೆಯ ಜನರ ಆಶಾಭಾವನೆ ಈಡೇರಿಸಬೇಕೆಂದು ರಾಹುಲ ಕಲಗೊಂಡ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!