- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಮುದ್ದೇಬಿಹಾಳದಲ್ಲಿ "ಹಸಿದವರಿಗೆ ಮಾನವೀಯ ನೆರವು”

ಮುದ್ದೇಬಿಹಾಳದಲ್ಲಿ “ಹಸಿದವರಿಗೆ ಮಾನವೀಯ ನೆರವು”

ಮುದ್ದೇಬಿಹಾಳ : ಪಟ್ಟಣದ ಮಕ್ಕಾ ಮಸ್ಜಿದ್ ಕಮಿಟಿಯಿಂದ ಇಂದಿರಾ ವೃತ್ತದ ಬಳಿ “ಹಸಿದವರಿಗೆ ಮಾನವೀಯ ನೆರವು” ಹೆಸರಿನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹಸಿದವರಿಗೆ, ಅಸಾಯಕರಿಗೆ, ನಿರ್ಗತಿಕರಿಗೆ, ಬಡವರಿಗೆ ಊಟ ಕಿಟ್ ನೀಡುವ ಮೂಲಕ ಮಾನವಿಯ ಮೌಲ್ಯ ಮೆರೆದರು.

ಈ ಸಂದರ್ಭದಲ್ಲಿ ತಾಲೂಕಾ ಕಸಾಪ ಮಹಾಂತಪ್ಪ ನಾವದಗಿ ಹಾಗೂ ಯುವ ಮುಖಂಡ ಕಾಮರಾಜ ಬಿರಾದಾರ ಮಾತನಾಡಿ, ಕೋರೊನಾ ಅತೀ ವೇಗದಲ್ಲಿ ಹರಡಿ ನಮ್ಮೇಲ್ಲರ ನೆಮ್ಮದಿ ಹಾಳುಗೇಡವಿದೆ, ಅಲ್ಲದೇ ನೂರಾರು ಬಡ ಕುಟುಂಬಗಳ ಒಂದು ಹೊತ್ತಿನ ಊಟಕ್ಕೂ ತೀವೃ ಸಂಕಷ್ಟ ಅನುಭವಿಸುವಂತಾಗಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಾ ಮಸ್ಜಿದ್ ಕಮಿಟಿಯಿಂದ ಹಸಿದ ಹೊಟ್ಟೆಗೆ ತುತ್ತು ಅನ್ನ ನೀಡಿ ಮಾನವಿ ಮೌಲ್ಯ ಎತ್ತಿ ಹಿಡಿಯುವ ಕಾರ್ಯ ನಿಜಕ್ಕೂ ಶ್ಲಾಘನಿಯ. ಈ ಕೋವಿಡ್ ಆದಷ್ಟು ಬೇಗ ಸಂಪೂರ್ಣ ತೊಲಗಿ ಲಾಕ್ಡೌನ್ ಮೇ 24 ಕ್ಕೆ ಮುಗಿದರೆ ಒಳ್ಳೆಯದು ಎಚಿದು ಹೇಳಿದರು.

ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಹೋಟೆಲ್ ಅಂಗಡಿ ಮುಂಗಟ್ಟುಗಳು ಬಂದಾಗಿದ್ದರಿAದ ಪಟ್ಟಣಕ್ಕೆ ಬಂದ ಗ್ರಾಮಸ್ಥರಿಗೆ ಮತ್ತು ಅಸಾಯಕರಿಗೆ ಊಟ ಒಳಗೊಂಡ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಗೋಪಾಲ್ ಕಾಸೆ, ಜೆಡಿಎಸ್ ಮುಖಂಡ ರಸೂಲ ದೇಸಾಯಿ, ಸದಸ್ಯರಾದ ಮಹಿಬೂಬ ಗೊಳಸಂಗಿ, ಶಿವು ಶಿವಪುರ, ಅಲ್ಲಾಭಕ್ಷ ಢವಳಗಿ, ಹಾಗೂ ಜಬ್ಬರ್ ಗೂಲದಾಂಜ್, ಅಬ್ದುಲ್ ಅಜಿಜ್, ಜಾಲಗಾರ, ಮೌಲಾನಾ ಅಲ್ತಾಫ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!