- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗೆ ಮನವಿ ಮಾಡಿದ ಬಸವನಾಡಿನ ಮಠಾಧೀಶರುಗಳು

ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗೆ ಮನವಿ ಮಾಡಿದ ಬಸವನಾಡಿನ ಮಠಾಧೀಶರುಗಳು

ಬಸವನಬಾಗೇವಾಡಿ : ವಿಜಯಪುರ ನಗರದಲ್ಲಿ ಆರಂಭವಾಗಲಿರುವ ವಿಮಾನ ನಿಲ್ದಾಣದ ಕಾಮಗಾರಿ ಕೈಗೊಂಡಿದ್ದು ಸಂತಸ ತಂದಿದ್ದು ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರನ್ನು ನಾಮಕರಣ ಮಾಡಬೇಕೆಂದು ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಸ್ಥಳೀಯ ಬಸವ ಜನ್ಮ ಸ್ಮಾರಕ ಭವನದಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಬಸವನಾಡಿನ  ಮಠಾಧೀಶರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾಜದಲ್ಲಿ ಸಮಾನತೆಯ ಪರಿವರ್ತನೆ ಸಂದೇಶ ಸಾರುವ ಮುಖಾಂತರ ಶರಣ ಸಂಪ್ರದಾಯಕ್ಕೆ ಪ್ರೇರಣಾಶಕ್ತಿಯಾಗಿದ್ದರು ಇಂತಹ ಮಹಾನ ಪುರುಷ ಬಸವೇಶ್ವರರ ಹೆಸರನ್ನು ವಿಜಯಪುರ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವದು ಅತೀ ಸೂಕ್ತವಾಗಿದ್ದು ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ನಾಮಕರಣ ಮಾಡಲು ಉತ್ಸುಕರಾಗುತ್ತಾರೆ ಎಂಬ ವಿಶ್ವಾಸವಿದ್ದು ಬಸವೇಶ್ವರ ವಚನ ಸಾಹಿತ್ಯ ಹಾಗೂ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳುವ ಜೊತೆಗೆ ಬಸವೇಶ್ವರರ ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ಅಪಾರ ಶ್ರದ್ಧೆ-ಭಕ್ತಿ ಹೊಂದಿದ್ದಾರೆ, ವಿಮಾನ ನಿಲ್ದಾಣಕ್ಕೆ ಬಸವೇಶ್ವರ ನಾಮಕರಣವಾಗುವರೆಗೆ ಎಲ್ಲರೂ ಸಂಘಟಿತರಾಗಿ ಮುನ್ನಡೆಯೋಣ ಎಂದು ಹೇಳಿದರು.

ಇಂಗಳೇಶ್ವರ ವಚನಶಿಲಾ ಮಂಟಪ ವಿರಕ್ತಮಠದ ಚನ್ನಬಸವ ಮಹಾಸ್ವಾಮೀಜಿ, ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಮಸಬಿನಾಳ ದಾಸೋಹ ಮಹಾಸಂಸ್ಥಾನ ವಿರಕ್ತಮಠದ ಸಿದ್ದರಾಮ ಮಹಾಸ್ವಾಮೀಜಿ, ಹುಣಶ್ಯಾಳ ಪಿಬಿ ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಪುರಸಭೆ ಸ್ಥಾಯಿ ಸಮೀತಿ ಅದ್ಯಕ್ಷ ಅಶೋಕ ಹಾರಿವಾಳ ಮಾತನಾಡಿ ಸಮಾನತೆ ಸಾರಿದ ಬಸವಣ್ಣನವರ ಹೆಸರಿಡುವಂತೆ ಆಗ್ರಹಿಸಿದರು.

ನಿವೃತ್ತ ಮುಖ್ಯೋಪಾಧ್ಯಾಪಕ ಎಂ.ಜಿ.ಆದಿಗೊಂಡ, ವಿವೇಕ ಬ್ರಿಗೇಡ ಮುಖಂಡ ವಿನೂತ ಕಲ್ಲೂರ, ಪತಂಜಲಿ ಯೋಗ ಸಮಿತಿ ತಾಲೂಕ ಪ್ರಭಾರಿ ಕಾಶೀನಾಥ ಅವಟಿ, ಜೇನುಗೂಡು ಸಂಸ್ಥೆ ಮುಖಂಡ ಬಸವರಾಜ ಮಾದನಶೆಟ್ಟಿ, ಮುಖಂಡ ಸಂಗಮೇಶ ಓಲೇಕಾರ, ಪ್ರಭಾಕರ ಖೇಡದ, ನಾಗಪ್ಪ ಚಿಗರಿ, ಪಂಚಮಸಾಲಿ ತಾಲೂಕ ಯುವ ಘಟಕದ ಅಧ್ಯಕ್ಷ ರವಿಗೌಡ ಚಿಕ್ಕೊಂಡ, ಶಿವಾನಂದ ತೋಳನೂರ, ಸತೀಶ ಕ್ವಾಟಿ, ರೈತ ಸಂಘದ ತಾಲೂಕ ಅದ್ಯಕ್ಷ ಸಿದ್ರಾಮ ಅಂಗಡಗೇರಿ, ಗಿರಿಮಲ್ಲಪ್ಪ ಮೇಟಿ, ಶ್ರೀಕಾಂತ ಕೊಟ್ರಶೆಟ್ಟಿ, ಬಾಬು ನಿಡಗುಂದಿ ಸೇರಿದಂತೆ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ಶಿರಸ್ತೇದಾರ ಶ್ರೀನಿವಾಸ ಕಲಾಲ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!