- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಮಾನವಿಯತೆ ಮೆರೆದ ಮಾಜಿ ಶಾಸಕ ಟಿ. ಎಚ್. ಸುರೇಶಬಾಬು

ಮಾನವಿಯತೆ ಮೆರೆದ ಮಾಜಿ ಶಾಸಕ ಟಿ. ಎಚ್. ಸುರೇಶಬಾಬು

ಕಂಪ್ಲಿ : ಮಾಜಿ ಶಾಸಕರಾದ ಟಿ.ಎಚ್. ಸುರೇಶಬಾಬು ಕ್ಷೇತ್ರದ ಜನರ ಆತಂಕವನ್ನು ದೂರ ಮಾಡಲು ತಮ್ಮ ಸ್ವಂತ ಹಣದಿಂದ ಎಸ್.ಬಿ.ಫೌಂಡೇಷನ್ ನೇತೃತ್ವದಲ್ಲಿ ಪಟ್ಟಣದಲ್ಲಿ ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ೫೦ ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನುಇಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಬಿ. ಶ್ರೀರಾಮುಲು ಹಾಗೂ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಜಿಗಳು ಉದ್ಘಾಟಿಸಿದರು.

ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮಾತನಾಡಿದ ಸುರೇಶಬಾಬು, ಈ ಆಸ್ಪತ್ರೆಗೆ ಎಸ್.ಬಿ.ಫೌಂಡೇಷನ್ ವತಿಯಿಂದ ನುರಿತ ವೈದ್ಯರು ಹಾಗೂ ಶುಶ್ರುಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಔಷದ ಉಪಚಾರ ಹಾಗೂ ಉಚಿತ ಊಟ-ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗುವ ವರೆಗಿನ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮಾಜಿ ಶಾಸಕ ಸುರೇಶಬಾಬು ಅವರ ಎಸ್.ಬಿ.ಪೌಂಡೇಷನ್ ನಿಂದ ಭರಿಸಲಾಗುವುದು ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ ೧೫೦೦ ರಿಂದ ೨೦೦೦ ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಅಲ್ಲದೇ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್ ಮತ್ತು ಆಕ್ಸಿಜನ್ ಸರಿಯಾದ ಸಮಯಕ್ಕೆ ದೊರಕದ ಕಾರಣ ಜನರು ಸಂಕಷ್ಟಕ್ಕೊಳಗಾಗಿರುವ ಇಂತಹ ಕಠಿಣ ಮತ್ತು ಆತಂಕದ ಸಮಯದಲ್ಲಿ ಎಸ್ ಬಿ ಫೌಂಡೇಶನ್ ವತಿಯಿಂದ ತಮ್ಮ ತಂದೆಯವರಾದ ರೇಲ್ವೆ ಬಾಬು ಅವರ ಸ್ಮರಣಾರ್ಥ ಕಂಪ್ಲಿಯಲ್ಲಿ ೫೦ ಹಾಸಿಗೆಯ ಹಾಗೂ ೧೦ ಆಕ್ಸಿಜನ್ ಬೆಡ್ ಸೌಕರ್ಯ ಹೊಂದಿರುವ ಕೋವಿಡ್ ಆಸ್ಪತ್ರೆಯನ್ನು ಕಂಪ್ಲಿ ಭಾಗದ ಜನತೆಗೆ ಅರ್ಪಿಸಲಾಗಿದೆ ಎಂದರು.

ಅಲ್ಲದೇ, ಐವತ್ತು ಹಾಸಿಗೆಯ ಈ ಆಸ್ಪತ್ರೆಯನ್ನು ಮುಂದೆ ಅವಶ್ಯಕತೆ ಬಿದ್ದರೆ, ೨೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನು ಹೊಂದಲಾಗಿದ್ದು, ಇತ್ತೀಚೆಗೆ ಜಿಲ್ಲೆಯ ಜಿಂದಾಲ್ ನಲ್ಲಿ ಕೊರೋನಾ ಸೋಂಕಿತರಿಗೆ ೩೦೦ ಹಾಸಿಗೆಯ ಆಸ್ಪತ್ರೆಯನ್ನು ಹಾಗೂ ಆಕ್ಸಿಜನ್ ಸೇರಿದಂತೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿ ಆಸ್ಪತ್ರೆಯನ್ನು ಪ್ರಾರಂಭಿಸಿರುವ ಬೆನ್ನಲ್ಲೇ ಜಿಲ್ಲೆಯ ಕಂಪ್ಲಿ ಮತ್ತು ಕುರಗೋಡು ಪಟ್ಟಣಗಳಲ್ಲಿ ಈ ಆಸ್ಪತ್ರೆಗಳು ಪ್ರಾರಂಭವಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಮುಂಬರುವ ದಿನಗಳಲ್ಲಿ ಕಂಪ್ಲಿ ಕ್ಷೇತ್ರದ ಕುರಗೋಡು ಪಟ್ಟಣದಲ್ಲಿ ಇದೇ ತರಹದ ಆಸ್ಪತ್ರೆ ಪ್ರಾರಂಭಿಸಲು ಯೋಜನೆಯನ್ನು ರೂಪಿಸುತ್ತಿದ್ದು,ಕೆಲವೇ ದಿನಗಳಲ್ಲಿ ಈ ಯೋಜನೆಯೂ ಜಾರಿಗೆ ಬರಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಮ್ಮಿಗನೂರಿನ ಮಾಜಿ ಸಂಸದರಾದ ಸಣ್ಣ ಪಕೀರಪ್ಪ, ತಹಸೀಲ್ದಾರ್ ಗೌಸಿಯಾ, ತಾಲೂಕಾ ಆರೋಗ್ಯ ಅಧಿಕಾರಿ ಡಾ: ರಾಧಿಕಾ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!