- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮಾದರಿ ಶಾಲೆಗೆಗಾಗಿ 2.1 ಕೋಟಿ ಮುಂಜೂರು. ಸಂಸದರಿಂದ ಹರ್ಷ ವ್ಯಕ್ತ

ಮಾದರಿ ಶಾಲೆಗೆಗಾಗಿ 2.1 ಕೋಟಿ ಮುಂಜೂರು. ಸಂಸದರಿಂದ ಹರ್ಷ ವ್ಯಕ್ತ

ವಿಜಯಪುರ : ಇಂಡಿ ತಾಲೂಕಿನ ಗುಂದವಾನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆದರ್ಶ ಹಾಗೂ ಮಾದರಿ ಶಾಲೆಯಾಗಿ ರೂಪಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2.1 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸದರು, ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗುಂದವಾನ ಶಾಲೆಯ ಪ್ರಗತಿಗೆ ಈ ಅನುದಾನ ಬಿಡುಗಡೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು, ಈ ಮನವಿಗೆ ಸ್ಪಂದಿಸಿರುವ ಪ್ರಾಧಿಕಾರ ಗುಂದವಾನ ಪ್ರಾಥಮಿಕ ಶಾಲೆಯ ಸರ್ವತೋಮುಖ ಪ್ರಗತಿ ಹಾಗೂ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ದೃಷ್ಟಿಯಿಂದ 2.1 ಕೋಟಿ ರೂ.ಗಳನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಈಗಾಗಲೇ ಪತ್ರ ಸಹ ರವಾನಿಸಿದ್ದು, ಶಾಲೆಯ ಪ್ರಗತಿ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ ಇಂಜನಿಯರಿಂಗ್ ವಿಭಾಗ ಶೀಘ್ರದಲ್ಲಿಯೇ ಟೆಂಡರ್ ಕರೆದು ಆರಂಭಿಸಲಿದೆ ಎಂದು ಸಂಸದ ಜಿಗಜಿಣಗಿ ಹರ್ಷ ವ್ಯಕ್ತಪಡಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!