- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ

ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ

ರಾಯಚೂರು : ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ರಾತ್ರಿಯಿಂದ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನ-ಜೀವನವನ್ನ ಅಸ್ತವ್ಯಸ್ತಗೊಳಿಸಿದೆ.

ಜಿಲ್ಲೆಯ ಮಸ್ಕಿ ಪಟ್ಟಣದ ಗಾಂಧಿ ನಗರದ ಬಡಾವಣೆಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದು ಮನೆಯೊಳಗೆ ನೀರು ನುಗ್ಗಿವೆ. ಇದರಿಂದ ಮನೆಯೊಳಗೆ ವಸ್ತುಗಳು, ಆಹಾರ ಪದಾರ್ಥಗಳು ನೀರು ಪಾಲಾಗಿ, ಮಲಗಲು ನೆಲೆಯಿಲ್ಲದೆ ಸಮಸ್ಯೆ ಎದುರಿಸಿ, ಮನೆಯೊಳಗಿನ ಸಾಮಾನುಗಳನ್ನು ಹೊರಗಡೆ ಹಾಕಲು ಪರದಾಡಿದರು.

ಮನೆಯ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳು, ಜೀಪ್‌ಗಳು ನೀರಿನಲ್ಲಿ ಮುಳಿಗಿವೆ. ಈ ಮಳೆ ಆವಾಂತರದಿಂದ ಜನರು ರಾತ್ರಿಯಿಡಿ  ಜಾಗರಣೆ ಮಾಡುವಂತಾಗಿದ್ದು, ಜಿಲ್ಲೆಯ ಮಳೆ ಮುಂದುವರೆದಿದೆ. ವಿವಿಧ ಕಡೆಗಳ ತೆಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿ, ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಓಡಾಡುವುದಕ್ಕೂ ತೊಂದರೆ ಅನುವಿಸುತಿದ್ದಾರೆ. ಒಂದೆಡೆ ವರುಣ ಅಬ್ಬರದಿಂದ ಜನ-ಜೀವನ ಅಸ್ತವ್ಯಸ್ತಗೊಳಿಸಿದ್ದರೆ, ಇತ್ತ ಅನ್ನಧಾತನ ಮೊಗದಲ್ಲಿ ಮಾತ್ರ ಮಂದಹಾಸ ಮೂಡಿಸಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!