- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮನೆಯಲ್ಲಿಯೇ ಶಂಕರಾಚಾರ್ಯ ಜಯಂತ್ರಯೋತ್ಸವ ಆಚರಣೆ

ಮನೆಯಲ್ಲಿಯೇ ಶಂಕರಾಚಾರ್ಯ ಜಯಂತ್ರಯೋತ್ಸವ ಆಚರಣೆ

ಮುದ್ದೇಬಿಹಾಳ : ಕೊರೋನಾ ಹಿನ್ನೆಲೆ ವಿಶ್ವದಾರ್ಶನಿಕರ ದಿನದ ಅಂಗವಾಗಿ ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಆಚರಣೆ ಮಾಡಲಾಗುತ್ತಿದ್ದ ಶಂಕರಾಚಾರ್ಯ ಜಯಂತ್ರಯೋತ್ಸವವನ್ನು ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆಯವರು ಇಂದು ಕುಟುಂಬ ಸಮೇತವಾಗಿ ಮನೆಯಲ್ಲಿಯೇ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ರಾಮಚಂದ್ರ ಹೆಗಡೆ ಮಾತನಾಡಿ, ಧರ್ಮ ಸ್ಥಾಪಕರನ್ನ, ಧರ್ಮ ಸುಧಾರಕರನ್ನ, ಸಂತರನ್ನ ಒಂದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿಸುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ. ಪ್ರತಿಯೊಬ್ಬ ಜೀವಿಗೆ ಸೂರ್ಯನ ಬೆಳಕು, ಬೀಸುವ ಗಾಳಿ, ಸುರಿವ ಮಳೆ, ಸುಡುವ ಅಗ್ನಿ ಆವಶ್ಯಕವಿರುವಂತೆ ಮಹಾಪುರುಷರ ತತ್ವ ಆಡಳಿತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಿದೆ. ಇದರಿಂದ ಸಹಜೀವನ ಜೊತೆಗೆ ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದರೊಂದಿಗೆ ವಿಶ್ವಶಾಂತಿ ಸಾಧಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶ್ವ ದಾರ್ಶನಿಕರ ದಿನಾಚರಣೆಯನ್ನು ಮುಖ್ಯೋಪಾಧ್ಯಾಯರು ಮಾಡಿದರು.

ಈ ಸಂದರ್ಭದಲ್ಲಿ ಪತ್ನಿ ರಂಜಿತಾ ಹಾಗೂ ಪುತ್ರ ಅಭಿರಾಮ, ಗುರುನಾಥ ಕತ್ತಿ ಆಚರಣೆಯಲ್ಲಿ ತೊಡಗಿ ಶಂಕರಾಚಾರ್ಯರ ತತ್ವ ಆದೇಶಗಳ ಬಗ್ಗೆ ತಿಳಿದುಕೊಂಡರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!