- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮದುವೆ ವಾರ್ಷಿಕೋತ್ಸವಕ್ಕೆ ಆಹಾರದ ಕಿಟ್ ವಿತರಿಸಿದ ಎಲ್‌ಐಸಿ ಅಧಿಕಾರಿ

ಮದುವೆ ವಾರ್ಷಿಕೋತ್ಸವಕ್ಕೆ ಆಹಾರದ ಕಿಟ್ ವಿತರಿಸಿದ ಎಲ್‌ಐಸಿ ಅಧಿಕಾರಿ

ಬಸವನಬಾಗೇವಾಡಿ : ಇಲ್ಲಿಯ ಎಲ್‌ಐಸಿ ಅಧಿಕಾರಿ ವಿವೇಕಾನಂದ ಕಲ್ಯಾಣಶೆಟ್ಟಿ ಅವರು ತಮ್ಮ 25ನೇ ಮದುವೆ ವಾರ್ಷಿಕೋತ್ಸವದ ನಿಮಿತ್ತ ಪಟ್ಟಣದ ಹಲವು ಕಡೆಗಳಲ್ಲಿಅವಶ್ಯಕತೆ ಇರುವ ಕುಟುಂಬಗಳಿಗೆ ಆಹಾರದ ಕಿಟ್ (ರೇಷನ್) ವಿತರಿಸಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಜನರು ಮನೆಯಲ್ಲಿಯೇ ಇರುತ್ತಿದ್ದು, ಅಂತಹವರ ಜೀವನೋಪಾಯಕ್ಕಾಗಿ ಒಳ್ಳೆಣ್ಣಿ, ಶೇಂಗಾ, ಪುಟಾಣಿ, ಅವಲಕ್ಕಿ, ಸಕ್ಕರಿ, ಚಹಾಪುಡಿ ಸೇರಿದಂತೆ ಮಸಾಲಿ ಸಾಮಾಗ್ರಿಗಳು ಇರುವ 650ರೂ,ಗಳ ಮೊತ್ತದ ಕಿಟ್ ನೀಡುವ ಮೂಲಕ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಕೊರೋನಾ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾವಿತ್ರಿ ಕಲ್ಯಾಣಶೆಟ್ಟಿ, ಮುಕ್ತಾ (ಕಾವ್ಯಾ) ಕಲ್ಯಾಣಶೆಟ್ಟಿ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!