- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭಾರತ ಸಾಧನೆಗೆ ಸ್ಪೂರ್ತಿ. ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ಶಿವಾನಂದ ಮೆಚ್ಚುಗೆ

ಭಾರತ ಸಾಧನೆಗೆ ಸ್ಪೂರ್ತಿ. ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ಶಿವಾನಂದ ಮೆಚ್ಚುಗೆ

ಬಸವನಬಾಗೇವಾಡಿ : ಭಾರತ ಜಗತ್ತಿಗೆ ಸ್ಪೂರ್ತಿದಾಯಕವಾಗಿದೆ. ಪರಂಪರೆಯಿಂದ ಒಲಂಪಿಕ್ಸ್ ನವರೆಗೆ ಕೂಡಾ ಹೆಮ್ಮೆಯ ಪಡುವಂತಹ ಸಾಧನೆ ನಮ್ಮದಾಗಿದೆ ಎಂದು ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಹಾಲಿ ಶಾಸಕ ಶಿವಾನಂದ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವನಬಾಗೇವಾಡಿ ಪಟ್ಟಣದಲ್ಲಿ ತಾಲೂಕಾ ಆಡಳಿತದವತಿಯಿಂದ ಜರುಗಿದ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಈ 75 ವರ್ಷಗಳ ಸಾಧನೆಯ ಸಂಭ್ರಮದಲ್ಲಿ ನಾವು ನಮ್ಮ ಪೂರ್ವಜರನ್ನ ಈ ಮಣ್ಣಿಗಾಗಿ ಹೋರಾಟ ಮಾಡಿದ ವೀರರನ್ನು ನೆನೆಯುವ ಮೂಲಕ ಗೌರವ ಸಲ್ಲಿಸಬೇಕಿದೆ ಎಂದು ಸ್ವಾತಂತ್ರಯಕ್ಕೆ ಬಲಿದಾನ ಮಾಡಿದ ವೀರರನ್ನು ಸ್ಮರಿಸಿದರು.

ಅಲ್ಲದೇ ನಾವು ಇಂದು ಹೆಚ್ಚಿನ ಸಂಭ್ರಮ ಆಚರಿಸಲು ಮಹಾಮಾರಿ ಕೋವಿಡ್ ಎನ್ನುವ ಸಂದಿಗ್ದ ಪರಿಸ್ಥಿತಿ ಎದುರಾಗಿದೆ.  ಇದರ ನಡುವೆಯೂ ಕೂಡಾ ನಮ್ಮ ಕೋವಿಡ್ ವಾರಿಯರ್ ಗಳ ಕಾರ್ಯಕ್ಕೆ ಶ್ಲಾಘಿಸಲೇಬೇಕು. ಕಾರಣ ಅವರು ಕೋವಿಡ್ ಅಲೆಯಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನಸೇವೆಗೈದಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ ಅವರು, ಮುಂದೆ ಈ ಮಹಾಮಾರಿಯನ್ನು ಗೆಲ್ಲಲಿದ್ದೇವೆ, ಈಗಾಗಲೇ ದೇಶಾದ್ಯಂತ ಐವತ್ತು ಮೂರು ಕೋಟಿ ಜನರಿಗೆ ಲಸಿಕೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡಿ ಆರೋಗ್ಯವಂತಾರಾಗುತ್ತೇವೆ ಎಂಬ ಭರವಸೆ ಇದೆ ಎಂದು ಹೇಳಿದರು.

ರೈತರ ಕೊಡುಗೆ ಅಪಾರ : ಅಂದು ನಮ್ಮ ದೇಶದಲ್ಲಿ ಲಕ್ಷಾಂತರ ಕುಟುಂಬಗಳಿಗೆ ತಿನ್ನಲು ಅನ್ನ ಸಿಗದ ಪರಿಸ್ಥಿತಿ ಇತ್ತು ಆದರೆ, ಇಂದು ನಮ್ಮ ದೇಶದಲ್ಲಿ ಮುಂದಿನ ಆರು ತಿಂಗಳುಗಳ ಕಾಲ ಆಹಾರ ಸೇಖರಣೆಯಾಗಿಟ್ಟುಕೊಳ್ಳುವ ಶಕ್ತಿ ಹೊಂದಿದ್ದೇವೆ, ಇದಕ್ಕೆ ಮೂಲಾಧಾರವೇ ಈ ರಾಷ್ಟ್ರದ ರೈತ. ಭಾರತದಲ್ಲಿ ಅನ್ನಧಾತನೇ ನಿಜವಾದ ದೇವರು. ಮುಂಬರುವ ದಿನಗಳಲ್ಲಿ ರೈತ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶ್ಲಾಘಿಸಿದರು.

ಕ್ರಾಂತಿ ಕೇಶರಿ, ಹಂಡೆ ವಜೀರ ಸೈನಿಕರು ಇದು ಸ್ವಾತಂತ್ರ್ಯ ಹೋರಾಟದ ರೋಚಕ ಬಲಿದಾನದ ಕಥೆ

ಇನ್ನೂ ನಮ್ಮ ದೇಶ ಸಂಶೋಧನೆಯಲ್ಲಿ ಭೂಮಿಯಿಂದ ಆಕಾಶದವರೆಗೂ ಹೆಮ್ಮೆ ಪಡುವಂತಹ ಸಾಧನೆ ಗೈದಿದೆ. ಪ್ರಪಂಚದ ಮೂಲೆ ಮೂಲೆಗೂ ನಮ್ಮ ತಂತ್ರಜ್ಞಾನ ಹರಡಿದೆ ಎನ್ನುವ ವಿಚಾರವೇ ನಮಗೆ ಹೆಮ್ಮೆ. ಈ ಎಲ್ಲ ಸಾಧನೆಗಳ ಮಧ್ಯೆ ಸ್ವಾತಂತ್ರ್ಯ ಸಂಭ್ರಮ ನಮ್ಮ ಬದುಕನ್ನ ಇನ್ನಷ್ಟು ಹಸನಗೊಳಿಸಲಿದೆ ಎಂದರು.

ಒಲಂಪಿಕ್ಸ್ ಸಾಧಕರಿಗೆ ಮೆಚ್ಚುಗೆ : ಇತ್ತೀಚೆಗೆ ನಡೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಜಗತ್ತು ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಸಂಭ್ರಮದ ಪ್ರಮುಖ ಹೆಮ್ಮೆಯಲ್ಲಿ ಕ್ರೀಡಾ ಸಾಧಕರು ಇದ್ದಾರೆ ಎಂದು ಹೇಳಿದರು.

ಹೋರಾಟದ ಬದುಕಲ್ಲಿ ಮರೆಯಾದ ಬಸವನಾಡಿನ ಸ್ವಾಂತಂತ್ರ್ಯ ವೀರ ಯಮನಮ್ಮ ಅವಟಿ

ಯೋಧರ ಸ್ಮರಣೆ : ಈ ತಾಯ್ನಾಡಿಗಾಗಿ ನಮ್ಮ ದೇಶದ ಯೋಧರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ದೇಶದ ರಕ್ಷಣೆ ಮಾಡುತ್ತಾರೆ. ಸಾಕಷ್ಟು ಜನ ಯೋಧರು ದೇಶಕ್ಕಾ ಪ್ರಾಣ ತ್ಯಾಗ ಮಾಡಿದ್ದಾರೆ. ನಮ್ಮ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಬೊಮ್ಮನಹಳ್ಳಿ ಕೂಡಾ ಬಲಿಧಾನ ಮಾಡಿ ಬಸವನಾಡಿಗೆ ಕೀರ್ತಿ ತಂದಿದ್ದಾನೆ. ಅದರಂತೆ ಇನ್ನೂ ಹಲವಾರು ಯೋಧರು ಪ್ರಾಣತ್ಯಾಗ ಮಾಡಿದ್ದಾರೆ  ಎಂದು ಶಾಸಕ ಪಾಟೀಲ ಸ್ಮರಿಸಿದರು.

ಹುತಾತ್ಮ ಯೋಧನ ಪುತ್ತಳಿ ನಿರ್ಮಿಸಿದ ಬಸವನಾಡಿನ ರಾಷ್ಟ್ರಭಕ್ತರು

ಅಲ್ಲದೇ ನಮ್ಮ ಬಸವನಬಾಗೇವಾಡಿ ಮತಕ್ಷೇತ್ರ ಕೂಡಾ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಜಿಲ್ಲೆಯಲ್ಲಿಯೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಮತಕ್ಷೇತ್ರ ನಮ್ಮದಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಸನ್ಮಾನ : ತಾಲೂಕಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಂತಹ ಮಹನಿಯರಿಗೆ ಇಂದಿನ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಕೋವಿಡ್ ನಿರ್ವಹಣೆಯಲ್ಲಿ ಸೇವೆಗೈದ ಪೌರ ಕಾರ್ಮಿಕರು ಸೇರಿದಂತೆ ಇನ್ನೀತರರಿಗೆ ಸನ್ಮಾನಿಸಲಾಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!