- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭಾರತ ಬಂದ್ : ಗುಮ್ಮಟನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಭಾರತ ಬಂದ್ : ಗುಮ್ಮಟನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ

ವಿಜಯಪುರ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ‌. ಹಲವು ಪ್ರಗತಿಪರ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಿಸಾನ್ ಮೊರ್ಚಾ ಕರೆ ನೀಡಿದ್ದು,  ಗುಮ್ಮಟನಗರಿ ವಿಜಯಪುರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಂದಿನಂತೆ ಬಸ್, ಆಟೋ ಸಂಚಾರ,  ಅಂಗಡಿ ಮುಗ್ಗಟ್ಟು ಗಳು ಪ್ರಾರಂಭ ವಾಗಿದ್ದವು. ಹೊಟೆಲ್, ಬೇಕರಿ ಸೇರಿದಂತೆ ಎಲ್ಲ ವ್ಯವಹಾರಗಳು ಎಂದಿನಂತೆ ಮಾಮೂಲು ಸ್ಥಿತಿಯಲ್ಲಿ ನಡೆದವು. 

ಮಳೆ ಬರ್ತಾ ಇದ್ದದ್ದರಿಂದ ಅಂಗಡಿ ಗಳು  ತಡವಾಗಿ ಪ್ರಾರಂಭಗೊಂಡವು. ಇನ್ನೂ ಅಲ್ಲಲ್ಲಿ ಸಂಘಟನೆಗಳ ಮೂಲಕ ಪ್ರತಿಭಟನೆ ಕೂಡಾ ನಡೆಯಿತು. ಇತ್ತ  ಮಳೆಯಲ್ಲೆ ಕಾಂಗ್ರೆಸ್ ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸಿತು.

ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಳೆಯ ನಡುವೆಯೂ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೇ ಎಪಿಎಂಸಿ ವ್ಯಾಪ್ತಿಯ ಮಾರುಕಟ್ಟೆಗಳ ಬಂದ್ ಆಗಿದ್ದವು. ಕೃಷಿ ಉತ್ಪನ್ನ ಮಾರಾಟ ಬಂದ್ ಹಣ್ಣು ಮತ್ತು ತರಕಾರಿ ಮಾರಾಟವೂ ಬಂದ್ ಆಗಿದ್ದವು. ವ್ಯಾಪಾರಸ್ಥರು, ಖರೀಧಿದಾರರು‌ ಹಾಗೂ ರೈತರಿಂದ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಭಾರತ್ ಬಂದ್ ಗೆ ಬೆಂಬಲಿಸ ಬೇಕೆಂದು ರೈತ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದಕ್ಕೆ ಬೆಂಬಲ ಸೂಚಿಸಿದ್ದವು.

ಇನ್ನೂ ವಿಜಯಪುರ ನಗರದ ಅಕ್ಕಮಹಾದೇವಿ ವಿವಿ ಪರೀಕ್ಷೆ ಮುಂದೂಡಲಾಗಿದೆ‌. ಇಂದು ನಡೆಯಬೇಕಿದ್ದ  ಸ್ನಾತಕ/ಸ್ನಾತಕೋತ್ತರ ಹಾಗೂ ಬಿಎಡ್ ಕೋರ್ಸ್‌ಗಳ ಪರೀಕ್ಷೆ ಮುಂದೂಡಲಾಗಿದೆ. ಭಾರತ ಬಂದ್ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತೊಂದರೆ ಯಾಗಬಾರದು ಎನ್ನುವ ದೃಷ್ಟಿಯಿಂದ  ಬಿಎಡ್ ವಿದ್ಯಾರ್ಥಿಗಳಿಗೆ ಇಂದು ನಡೆಯಬೇಕಿದ್ದ ಪರೀಕ್ಷೆ ನಾಳೆ ನಡೆಸಲು ನಿರ್ಧರಿಸಲಾಗಿದೆ.

ಸ್ನಾತಕ/ಸ್ನಾತಕೋತ್ತರ ವಿದ್ಯಾರ್ಥಿಗಳ ಮುಂದೂಡಿಕೆಯಾದ ಪರೀಕ್ಷೆಯ ದಿನಾಂಕ ನಂತರ ತಿಳಿಸಲಾಗುವುದು ಎಂದು ತಿಳಿಸಿ  ಪರೀಕ್ಷೆ ಮುಂದುಡಿಕೆ ಕುರಿತು  ಅಕ್ಕಮಹಾದೇವಿ ವಿವಿ ಮೌಲ್ಯಮಾಪನ ವಿಭಾಗದ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.

ಪ್ರತಿಭಟನೆ ಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!