- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಭಾರತ – ಜಪಾನ್ ನಗರಾಭಿವೃದ್ಧಿ ಒಪ್ಪಂದ ಸಹಿಗೆ ಅನುಮೋದನೆ

ಭಾರತ – ಜಪಾನ್ ನಗರಾಭಿವೃದ್ಧಿ ಒಪ್ಪಂದ ಸಹಿಗೆ ಅನುಮೋದನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಜಪಾನ್ ಸರಕಾರದ ಭೂ, ಮೂಲಸೌರ‍್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ನಡುವೆ ಸುಸ್ಥಿರ ನಗರಾಭಿವೃದ್ಧಿ ಕುರಿತು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ. ಈ ಒಪ್ಪಂದವು ಅಸ್ತಿತ್ವದಲ್ಲಿರುವ ನಗರಾಭಿವೃದ್ಧಿ ಕುರಿತ 2007 ರ ಒಪ್ಪಂದವನ್ನು ಹಿಂತೆಗೆದುಕೊಳ್ಳುತ್ತದೆ ಎಂದು ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವಾಲಯ ತಿಳಿಸಿದೆ.

ಅನುಷ್ಠಾನ ತಂತ್ರ : ಸಹಕಾರ ಒಪ್ಪಂದದ ಚೌಕಟ್ಟಿನಡಿಯಲ್ಲಿ ಸಹಕಾರದ ಕಾರ್ಯಕ್ರಮಗಳನ್ನು ಕಾರ್ಯ‍್ಯತಂತ್ರಗೊಳಿಸಲು ಮತ್ತು ಅನುಷ್ಠಾನಗೊಳಿಸಲು ಜಂಟಿ ಕರ‍್ಯ ತಂಡವನ್ನು (ಜೆಡಬ್ಲ್ಯೂಜಿ) ರಚಿಸಲಾಗುವುದು. ಜಂಟಿ ಕಾರ್ಯ‍್ಯ ತಂಡವು ವರ್ಷಕ್ಕೊಮ್ಮೆ ಜಪಾನ್ ಮತ್ತು ಭಾರತದಲ್ಲಿ ಪರ್ಯಾಯವಾಗಿ ಸಭೆ ಸೇರಲಿದೆ.

ಈ ಒಪ್ಪಂದದ ಅಡಿಯಲ್ಲಿನ ಸಹಕಾರವು ಒಪ್ಪಂದದ ಸಹಿಯ ದಿನಾಂಕದಿಂದ ಪ್ರಾರಂಭವಾಗುತ್ತದೆ ಮತ್ತು 5 ರ‍್ಷಗಳ ಅವಧಿಗೆ ಮುಂದುವರಿಯುತ್ತದೆ. ಅದರ ನಂತರ, 5 ವರ್ಷಗಳ ನಂತರದ ಅವಧಿಗೆ ಅದನ್ನು ಸ್ವಯಂಚಾಲಿತವಾಗಿ ನವೀಕರಿಸಬಹುದು.

ಪ್ರಮುಖ ಪರಿಣಾಮ : ಸಹಕಾರ ಒಪ್ಪಂದವು ಉಭಯ ದೇಶಗಳ ನಡುವೆ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಬಲವಾದ, ಗಾಢವಾದ ಮತ್ತು ಧೀರ್ಘಕಾಲೀನ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುತ್ತದೆ.

ಪ್ರಯೋಜನಗಳು : ನಗರ ಯೋಜನೆ, ಸ್ಮಾರ್ಟ್ ನಗರಗಳ ಅಭಿವೃದ್ಧಿ, ಕೈಗೆಟುಕುವ ವಸತಿ, (ಬಾಡಿಗೆ ವಸತಿ ಸೇರಿದಂತೆ), ನಗರಗಳ ಪ್ರವಾಹ ನಿರ್ವಹಣೆ, ಒಳಚರಂಡಿ ಮತ್ತು ತ್ಯಾಜ್ಯ ನೀರು ನಿರ್ವಹಣೆ, ನಗರ ಸಾರಿಗೆ (ಸುಧಾರಿತ ಸಾರಿಗೆ ನಿರ್ವಹಣೆ ವ್ಯಸವಸ್ಥೆ, ಟ್ರಾನ್ಸಿಟ್-ಓರಿಯೆಂಟೆಡ್ ಅಭಿವೃದ್ಧಿ ಮತ್ತು ಮಲ್ಟಿಮೋಡಲ್ ಇಂಟಿಗ್ರೇಷನ್ ಒಳಗೊಂಡು) ಮತ್ತು ವಿಪತ್ತು ಸ್ಥಿತಿಸ್ಥಾಪಕ ಅಭಿವೃದ್ಧಿ ಸೇರಿದಂತೆ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಒಪ್ಪಂದವು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!