- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬೆಳೆ ಹಾನಿ ಪರಿಹಾರಕ್ಕೆ ರಾಷ್ಟ್ರೀಯ ಬಸವ ಸೈನ್ಯ ಆಗ್ರಹ

ಬೆಳೆ ಹಾನಿ ಪರಿಹಾರಕ್ಕೆ ರಾಷ್ಟ್ರೀಯ ಬಸವ ಸೈನ್ಯ ಆಗ್ರಹ

ಬಸವನಬಾಗೇವಾಡಿ :  ಹೆಚ್ಚು ಮಳೆಯಾಗಿದ್ದರಿಂದ ಜಿಲ್ಲೆಯಾದ್ಯಂತ ರೈತರು ಬೆಳೆದ ಬೆಳೆ ಹಾನಿಯಾಗಿವೆ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಆಗ್ರಹಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ವತಿಯಿಂದ  ನಡೆದ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಶ್ರೀನಿವಾಸ್ ಕಲಾಲ ಅವರಿಗೆ ಮನವಿ ಸಲ್ಲಿಸಿ, ಮಾತನಾಡಿದ ಅವರು, ರೈತರು ಬೆಳೆದ ತೊಗರಿ, ಈರುಳ್ಳಿ, ದ್ರಾಕ್ಷಿ, ಮೆಕ್ಕೆಜೋಳ, ಅಜಿವಾನ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು, ರೋಗ ತಗುಲಿ ಹಾಳಾಗಿವೆ. ಆದಕಾರಣ ಸರ್ಕಾರ ವಿಜಯಪುರ ಜಿಲ್ಲೆಯನ್ನು  ಅತಿವೃಷ್ಟಿ ಜಿಲ್ಲೆಯೆಂದು ಘೋಷಣೆ ಮಾಡಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಪ್ರತಿಭಟನಾ ರ್ಯಾಲಿಯಲ್ಲಿ ಮುಖಂಡರಾದ ಸಂಗಮೇಶ್ ಓಲೆಕಾರ್. ಬಸವರಾಜ್ ಹಾರಿವಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಬಸಣ್ಣ ದೇಸಾಯಿ ಕಲ್ಲೂರ್, ಉಪಾಧ್ಯಕ್ಷರಾದ ಸುನಿಲಗೌಡ ಚಿಕ್ಕೊಂಡ,  ತಾಲೂಕ ಅಧ್ಯಕ್ಷ ಸಂಜು ಬಿರಾದಾರ್, ಶ್ರೀಕಾಂತ್ ಕೊಟ್ರಶೆಟ್ಟಿ, ಸಂಗಪ್ಪ ವಾಡೆದ, ಗುರುಲಿಂಗ ಬಸರಕೋಡ, ಜಟ್ಟಿಂಗರಾಯ ಮಾಲಗಾರ, ನಿಂಗಪ್ಪ ಅವಟಿ, ಶಂಕರ್ ಸಿಂಗ್ ರಜಪೂತ್,  ಗುರುರಾಜ ವಂದಾಲ, ವಿನೋದ ಗಬ್ಬುರ್,  ಮಾಂತೇಶ್ ಹೆಬ್ಬಾಳ, ವಿಜಯ ರಗಟಿ, ಅಮೃತ ಬಾಗೇವಾಡಿ, ಶ್ರವಣ ಕೊಡೆಕಲ್ ಮಠ, ಸಂಗಮೇಶ್ ಜಾಲಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!