- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬೂದಿಹಾಳದಲ್ಲಿ ಹೈಪೋಕ್ಲೋರೈಡ್ ಸಿಂಪರಣೆ

ಬೂದಿಹಾಳದಲ್ಲಿ ಹೈಪೋಕ್ಲೋರೈಡ್ ಸಿಂಪರಣೆ

ಬಸವನಬಾಗೇವಾಡಿ : ಕೋವಿಡ್-19 ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲ್ಲೆಯಲ್ಲಿ ಸರಕಾರದ ಆದೇಶದ ಪ್ರಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವೈರಸ್ ಹರಡದಂತೆ ಜಾಗ್ರತವಾಗಿ ಸ್ಯಾನೀಟೈಸರ್ ಸಿಂಪರಣೆ ಮಾಡಲಾಯಿತು.

ತಾಲೂಕಿನ ದಿಂಡವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂದಿಹಾಳ, ಕಾಮನಕೇರಿ ಗ್ರಾಮಗಳಲ್ಲಿ ಕಿಟ್ ನಾಶಕ ದ್ರಾವಣವನ್ನು ಗ್ರಾಮದ ದೇವಾಲಯಗಳು, ಮುಖ್ಯರಸ್ತೆ, ಅಂಗನವಾಡಿ ಕೇಂದ್ರಗಳು, ಬಸ್ಸ ನಿಲ್ದಾಣ, ಕಿರಾಣಿ ಅಂಗಡಿ, ನೀರಿನ ಗುಂಡಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಹೈಪೋಕ್ಲೋರೈಡ್ ರಾಸಾಯನ ದ್ರಾವಣ ಸಿಂಪರಣೆ ಮಾಡಲಾಯಿತು.

ಗ್ರಾಪಂ ಸದಸ್ಯ ಸಿದ್ದನಗೌಡ ಬಿರಾದಾರ ಮಾತನಾಡಿ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆಯಿಂದ ಕೊರೋನಾ ವೈರಸ್ ಸುಲಭವಾಗಿ ನಾಶಪಡಿಸಬಹುದು, ಇದನ್ನು ಸಿಂಪರಣೆ ಮಾಡುವುದರಿಂದ ಪರ ಸ್ಥಳದಿಂದ ಬಂದು ಹೋದ ಜನರಿಂದ ಅಂಟಿದ ಸಾರ್ವಜನಿಕ ಸ್ಥಳಗಳಲ್ಲಿ ಇದ್ದ ವೈರಸ್‌ನ್ನು ಈ ದ್ರಾವಣ ಸಾಯಿಸುತ್ತದೆ ಎಂದು ಹೇಳಿದರು.

ಇಂದು ಬೂದಿಹಾಳ ಮತ್ತು ಕಾಮನಕೇರಿ ಗ್ರಾಮಗಳಿಗೆ ಔಷಧಿ ಸಿಂಪರಣೆ ಮಾಡಿ ನಾಳೆ ದಿಂಡವಾರ, ಉತ್ನಾಳ ಹಾಗೂ ಗ್ರಾಪಂ ವ್ಯಾಪ್ತಿಗೆ ಬರುವ ಎಲ್ಲಾ ತಾಂಡಾಗಳಿಗೆ ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆ ಮಾಡಿ ಕೊರೋನಾ ಮುಕ್ತ ಗ್ರಾಮ ಪಂಚಾಯತಿ ಮಾಡುತ್ತೇವೆ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿ ಮಲ್ಲಯ್ಯ ಗಣಿಮಠ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಯುವಕರು ಸೇರಿ ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಹರಿಜನ, ವಾಟರ್‌ಮ್ಯಾನ ಈರಣ್ಣ ಹೋಳಗಿ ಸೇರಿ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!