- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿ.ಎಲ್.ಡಿ.ಇ ಸಂಸ್ಥೆಯ ಶೇ.100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ. ಶಾಸಕ ಎಂ.ಬಿ.ಪಾಟೀಲ್ ಅಭಿನಂದನೆ

ಬಿ.ಎಲ್.ಡಿ.ಇ ಸಂಸ್ಥೆಯ ಶೇ.100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ. ಶಾಸಕ ಎಂ.ಬಿ.ಪಾಟೀಲ್ ಅಭಿನಂದನೆ

ವಿಜಯಪುರ : ಬಿ.ಎಲ್.ಡಿ.ಇ. ಬಿ.ಎಂ.ಪಾಟೀಲ್ ಪಿ.ಯು.ಕಾಲೇಜು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಚಾರ್ಯ ನವೀನ.ಎಸ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಹೈದ್ರಾಬಾದನ ನಾರಾಯಣ ಐಐಟಿ/ನೀಟ್ ಸಂಸ್ಥೆ ಸಂಯೋಜನೆಯೊಂದಿಗೆ  ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ಅನುಭವಿ ಶಿಕ್ಷಕರು ಬೋಧಸಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರೀಕ್ಷೆಯಲ್ಲಿ ಒಟ್ಟು 165 ವಿದ್ಯಾರ್ಥಿಗಳಲ್ಲಿ ಶೇಕಡಾ 100% ಫಲಿತಾಂಶದೊಂದಿಗೆ 55 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರಥಮ ಸುಚಿ ಶಾಹ-597 (99.5%), ದ್ವಿತೀಯ ಸೌಜನ್ಯ ಪಟ್ಟಣಶೆಟ್ಟಿ-583 (97.16%) ಹಾಗೂ ತೃತೀಯ ಸ್ಥಾನವನ್ನು ಅಪೂರ್ವ ಹಳ್ಳಿ-582 (97.%) ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸೇಜಲ್ ಜೈನ್-597(99.5%), ದ್ವಿತೀಯ ಮೋಕ್ಷಾ ಜೈನ್-595(99.1%), ಹಾಗೂ ತೃತೀಯ ಸ್ಥಾನವನ್ನು ಸ್ತುತಿ ಜೈನ್-593(98.8%) ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್, ನಿರ್ದೇಶಕ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಆಡಳಿತಾಧಿಕಾರಿಗಳಾದ ಡಾ. ಆರ್.ವಿ. ಕುಲಕರ್ಣಿ, ಕೌಶಿಕ್ ಬ್ಯಾನರ್ಜಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!