- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿ.ಎಲ್.ಡಿ.ಇ ಮಹಾವಿದ್ಯಾಲಯಕ್ಕೆ ನೂತನ ಪ್ರಾಚಾರ್ಯರಾಗಿ ಡಾ. ಬಿ.ಬಿ. ಶಿರಡೋಣಿ

ಬಿ.ಎಲ್.ಡಿ.ಇ ಮಹಾವಿದ್ಯಾಲಯಕ್ಕೆ ನೂತನ ಪ್ರಾಚಾರ್ಯರಾಗಿ ಡಾ. ಬಿ.ಬಿ. ಶಿರಡೋಣಿ

ಬಸವನಬಾಗೇವಾಡಿ : ಸ್ಥಳೀಯ ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ  ನೂತನ ಪ್ರಾಚಾರ್ಯರಾಗಿ ಡಾ. ಬಿ.ಬಿ.ಶಿರಡೋಣಿ ಅಧಿಕಾರ ಸ್ವೀಕರಿಸಿದರು.

ಡಾ.ಎಸ್.ಟಿ.ಮೇರವಾಡೆ ಅವರು ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಜಮಖಂಡಿ ವಾಣಿಜ್ಯ ಬಿ.ಎಚ್.ಎಸ್ ಕಲಾ ಮತ್ತು ಟಿ.ಜಿ.ಪಿ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಸಹಪ್ರಾಧ್ಯಾಪಕರಾದ  ಡಾ.ಬಿ.ಬಿ.ಶಿರಡೋಣಿ ಅವರನ್ನು ಪ್ರಭಾರಿ ಪ್ರಾಚಾರ್ಯ ಪ್ರೊ. ಪಿ.ಎಸ್ ತೋಳನೂರ ಅವರು ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನೂತನ ಪ್ರಾಚಾರ್ಯರಿಗೆ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಸ್ವಾಗತ ಕೋರಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!