- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿಜೆಪಿಯಿಂದ ಸೇವೆ ಸಮರ್ಪಣೆ ಅಭಿಯಾನ

ಬಿಜೆಪಿಯಿಂದ ಸೇವೆ ಸಮರ್ಪಣೆ ಅಭಿಯಾನ

ಬಸವನಬಾಗೇವಾಡಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ನಿಮಿತ್ತ ಬಿಜೆಪಿ ಭೂತಮಟ್ಟದ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ ಹಾಗೂ ಸಪ್ತಾಹ ಕಾರ್ಯಕ್ರಮದ ನಿಮಿತ್ತ ಸ್ಥಳೀಯ ಶಾಸಕರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಚ್ಚತಾ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಪ್ತಾಹದ ಸಂಚಾಲಕ ಜಗದೀಶ ಕೊಟ್ರಶೆಟ್ಟಿ, ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿರಿಯ ಮುಖಂಡ ಬಿ.ಕೆ.ಕಲ್ಲೂರ, ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಮಲ್ಲು ಶೇಬಗೊಂಡ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಭೂತಮಟ್ಟದಲ್ಲಿ ಸೆ.17ರಿಂದ ಅ.7ರವರೆಗೆ ಸ್ವಚ್ಚತಾ ಕರ‍್ಯಕ್ರಮ, ರೋಗಿಗಳಿಗೆ, ವಿಕಲಚೇತನರಿಗೆ ಸಹಾಯ ಮಾಡುವುದು, ಲಸಿಕಾ ಜಾಗೃತಿ, ಪತ್ರ ಚಳುವಳಿ ಸೇರಿದಂತೆ ಹತ್ತು ಹಲವಾರು ಕರ‍್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

 ಈ ಸಂದರ್ಭದಲ್ಲಿ ವಿ.ಎಂ.ಪರೆಣ್ಣನವರ, ಸಂಗಪ್ಪ ವಾಡೇದ, ಗೋಪಾಲ ಚಿಂಚೋಳಿ, ಅಮರಯ್ಯ ಹಿರೇಮಠ, ಪುರಸಭೆ ಸದಸ್ಯರಾದ ನೀಲಪ್ಪ ನಾಯಕ, ರವಿ ಪಟ್ಟಣಶೆಟ್ಟಿ, ಅಶೋಕ ಸಂಪನ್ನವರ, ನಿಂಗಣ್ಣ ಗುಂಡಳ್ಳಿ, ನಾಗಮ್ಮ ಗುಂಡಳ್ಳಿ, ವಿಜಯಕುಮಾರ ನಾಯಕ, ಸುರೇಶ ಲಮಾಣಿ, ಪರಶುರಾಮ ಜಮಖಂಡಿ, ರಾಜು ಮುಳವಾಡ, ಮುದಕಣ್ಣ ಹೊರ್ತಿ, ಮೌನೇಶ ಪತ್ತಾರ, ಶ್ರೀಕಾಂತ ಕೊಟ್ರಶೆಟ್ಟಿ, ಶ್ರೀಶೈಲ ಶಿರಗುಪ್ಪಿ, ವಿನೂತ ಕಲ್ಲೂರ, ವೈ.ಎಸ್.ಮ್ಯಾಗೇರಿ, ಲಕ್ಷö್ಮಣ ಅಂಬಿಗೇರ, ಶ್ರೀಕಾಂತ ಬಸರಕೋಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಸ್ವರೂಪರಾಣಿ ಬಿಂಜಲಭಾವಿ, ಗುಂಡು ಗಾಯಕವಾಡ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!