- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಾಲಕೀಯರ ಸಾವು ಪ್ರಕರಣ : ದಸಂಸ ಮುಖಂಡರಿಂದ ಜಂಟಿ ಸುದ್ದಿಗೋಷ್ಠಿ

ಬಾಲಕೀಯರ ಸಾವು ಪ್ರಕರಣ : ದಸಂಸ ಮುಖಂಡರಿಂದ ಜಂಟಿ ಸುದ್ದಿಗೋಷ್ಠಿ

ಬಸವನಬಾಗೇವಾಡಿ : ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಇಬ್ಬರು ಅಪ್ರಾಪ್ತ ಬಾಲಕೀಯರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವುದು ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ದಲಿತ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಪದೆ ಪದೆ ಆಗುತ್ತಿರುವ ಅನ್ಯಾಯವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯದರ್ಶಿ ರಾಹುಲ್ ತಳಕೇರಿ ಹಾಗೂ ದಲಿತ ಮುಖಂಡ ಗುರು ಗುಡಿಮನಿ ಹೇಳಿದರು.

ಪಟ್ಟಣದ ತಾಲೂಕ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಘಟನೆ ಸಂಭವಿಸಿ ನಾಲ್ಕೈದು ದಿನ ಕಳೆದರು ಯಾರೊಬ್ಬರು ಸಾಂತ್ವನ ಹೇಳಲು ಹೋಗದೆರುವುದು ಖೇದಕರ ಸಂಗತಿಯಾಗಿದೆ. ಅಲ್ಲದೆ ಪೊಲೀಸ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವಂತ ಪ್ರಯತ್ನ ನಡೆಯುತಿದೆ ಎಂಬ ಸಂಶಯ ಮೂಡುತ್ತಿದೆ ಕೂಡಲೇ ಪೊಲೀಸ ಇಲಾಖೆ ಎಚ್ಚೆತ್ತು ಕುಟುಂಬಸ್ಥರ ದೂರಿನನ್ವಯ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಬೇಕು ಇಲ್ಲವಾದರೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಕುದರಿಸಾಲವಾಡಗಿ ಗ್ರಾಮದಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ವರಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಇನ್ನೂವರೆಗೆ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಶೋಧ ಕಾರ್ಯ ಎಂದು ಪ್ರಕರಣವನ್ನು ಸಡಿಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮೃತ ಕುಟುಂಬಸ್ಥರ ಮನೆಗೆ ಹೋಗಿ ಮೃತ ಬಾಲಕೀಯರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ದೇವೇಂದ್ರ ಹಾದಿಮನಿ ಚಂದ್ರಕಾಂತ ಸಿಂಗೆ ಮಾತನಾಡಿದರು. ನಾಗೇಶ ಕಟ್ಟಿಮನಿ, ಪರಶುರಾಮ ಕಾಂಬಳೆ, ಗಂಗಾಧರ ಇಂಗಳೇಶ್ವರ, ಬಸವರಾಜ ತಳವಾರ, ಕಾಮೇಶ ಭಜಂತ್ರಿ, ಯಮನೂರಿ ಚಲವಾದಿ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!