- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸ್ ಸಂಚಾರ ಪ್ರಾರಂಭ . ಕೃತಜ್ಞತೆ ಸಲ್ಲಿಸಿದ ಕರವೇ ಮುಖಂಡರುಗಳು

ಬಸ್ ಸಂಚಾರ ಪ್ರಾರಂಭ . ಕೃತಜ್ಞತೆ ಸಲ್ಲಿಸಿದ ಕರವೇ ಮುಖಂಡರುಗಳು

ಬಸವನಬಾಗೇವಾಡಿ : ತಾಲೂಕಿನ ಹತ್ತರಕಿಹಾಳ ಗ್ರಾಮಕ್ಕೆ ವಿಜಯಪುರದಿಂದ ಉಕ್ಕಲಿ ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕೆಂದು ಗ್ರಾಮಸ್ಥರು, ವಿವಿಧ ಸಂಘಟನೆಯ ಹೋರಾಟಗಾರರು ಹಲವಾರು ವರ್ಷಗಳ ಹೋರಾಟ ನಡೆಸಿರುವುದರ ಫಲವಾಗಿ ಇಂದು ಗುರುವಾರ ಬೆಳಿಗ್ಗೆ ಸಾರಿಗೆ ಇಲಾಖೆಯಿಂದ ಬಸ್ ಸಂಚಾರ  ಆರಂಭಿಸುವ ಮೂಲಕ ಜನತೆಯ ಮನವಿಗೆ  ಸ್ಪಂದಿಸಿದಂತಾಗಿದೆ.

ಹತ್ತರಕಿಹಾಳ ಗ್ರಾಮಕ್ಕೆ ಉಕ್ಕಲಿ ಮಾರ್ಗವಾಗಿ ಬಸ್ ಆರಂಭಿಸಲಬೇಕು, ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತುಂಬಾನೆ ಅನುಕೂಲಕರವಾಗುತ್ತದೆ ಎಂದು ಸತತವಾಗಿ ಹಲವಾರು ವರ್ಷಗಳ ಕಾಲ ನಿರಂತರವಾಗಿ ಗ್ರಾಮಸ್ಥರು ಹೋರಾಟ ನಡೆಸಿ, ಸಾರಿಗೆ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಕೊನೆಗೂ ಅಧಿಕಾರಿಗಳು ಇವರ ಮನವಿಗೆ ಸ್ಪಂಧಿಸಿ ಬಸ್ ಸಂಚಾರ ಪ್ರಾರಂಭಿಸಿದ್ದು,  ಕರ್ನಾಟಕ ರಕ್ಷಣಾ ವೇದಿಕೆ ಉಕ್ಕಲಿ ಗ್ರಾಮ ಘಟಕದ ವತಿಯಿಂದ ಬಸ್ ಗೆ ವಿಶೇಷ ಪೂಜೆ ಸಲ್ಲಿಸಿ, ಸಾರಿಗೆ ಇಲಾಖೆಯ ಸಿಬ್ಬಂಧಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥ ಯುವ ಮುಖಂಡರುಗಳಾದ ವಿಶ್ವನಾಥ ತಡಲಗಿ, ರಾಹುಲ ಕಲಗೊಂಡ, ಗುಂಡು ಶಿಂಧೆ, ಬಿಲಾಲ ಭಾಗವಾನ, ನಾಥು ರಾಠೋಡ, ಶಂಕರ ಮಸಲಿ, ಮಲ್ಲು ರಾಠೋಡ, ಮಹಾಂತೇಶ ಹಿರೇಮಠ, ವಿಠ್ಠಲ ತಳೇವಾಡ, ಬಸೀರ ಬೆಂದ್ರೇಕರ, ಶರಣು ಯಾತದ, ಪ್ರಕಾಶ ಬಲ್ಕಿ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!