- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸ್ ಸಂಚಾರ ಆರಂಭಿಸಲು ಆಗ್ರಹ

ಬಸ್ ಸಂಚಾರ ಆರಂಭಿಸಲು ಆಗ್ರಹ

ಬಸವನಬಾಗೇವಾಡಿ: ಪಟ್ಟಣದಿಂದ ಪ್ರತಿನಿತ್ಯ ಬೆಳಗ್ಗೆ 5-30ಕ್ಕೆ ಹುಬ್ಬಳ್ಳಿಗೆ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಪಟ್ಟಣದ ಕೆಲ ನಿವಾಸಿಗಳು ಬಸ್ ಘಟಕದ ವ್ಯವಸ್ಥಾಪಕ ಪಿ.ಕೆ.ಜಾಧವ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಿಂದ ಪ್ರತಿನಿತ್ಯ ವ್ಯಾಪಾರಸ್ಥರು ಸೇರಿದಂತೆ ವಿವಿಧ ಕೆಲಸಗಳಿಗಾಗಿ ಇಲ್ಲಿನ ಜನರು ಹುಬ್ಬಳ್ಳಿಗೆ ತೆರುಳುತ್ತಾರೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧೆಡೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹುಬ್ಬಳ್ಳಿ ಮಾರ್ಗದಿಂದ ಸಂಚಾರಿಸುತ್ತಾರೆ. ಅಲ್ಲದೇ ರೋಗಿಗಳು ಹುಬ್ಬಳ್ಳಿ ಆಸ್ಪತ್ರೆಗೆ ತೆರುಳುತ್ತಾರೆ. ಆದರೆ ಪಟ್ಟಣದಿಂದ ಸಮರ್ಪಕವಾಗಿ ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ತೊಂದರೆ ಅನುಭವಿಸುವಂತಾಗಿದೆ ಅಲ್ಲದೇ ಸಂಜೆ ಹುಬ್ಬಳ್ಳಿ ಮಾರ್ಗದಿಂದ ಬಸವನಬಾಗೇವಾಡಿಗೆ ಬರಲು ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ವಿಜಯಪುರ ಮಾರ್ಗವಾಗಿ ಬಸವನಬಾಗೇವಾಡಿಗೆ ಬರುವಂತಹ ಪರಿಸ್ಥಿತಿ ಇದೆ. ಪಟ್ಟಣ ಸೇರಿದಂತೆ ತಾಲೂಕಿನ ಜನರಿಗೆ ಅನುಕೂಲವಾಗುವಂತೆ ಪ್ರತಿ ದಿನ ಬೆಳಗ್ಗೆ ಹುಬ್ಬಳ್ಳಿಗೆ ಬಸ್ ತೆರಳಬೇಕು. ಅಲ್ಲದೇ ಸಂಜೆ ಹುಬ್ಬಳ್ಳಿಯಿಂದ ಪಟ್ಟಣಕ್ಕೆ ಬರಲು ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಎಂ.ಜಿ.ಆದಿಗೊಂಡ, ಶೇಖರಗೌಡ ಪಾಟೀಲ, ಸಂಗು ಪಟ್ಟಣಶೆಟ್ಟಿ, ಶಾಂತು ಡಂಬಳ ಇದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!