- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಬಸವ ತೊಟ್ಟಿಲೋತ್ಸವ. ಶಾಸಕ ಶಿವಾನಂದ ಪಾಟೀಲ ಬಾಗಿ

ಬಸವ ತೊಟ್ಟಿಲೋತ್ಸವ. ಶಾಸಕ ಶಿವಾನಂದ ಪಾಟೀಲ ಬಾಗಿ

ಬಸವನಬಾಗೇವಾಡಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಶುಕ್ರವಾರ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಪಟ್ಟಣದ ಬಸವಜನ್ಮ ಸ್ಮಾರಕದಲ್ಲಿ ಸಂಪ್ರದಾಯದಂತೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬಸವರಾಜ ಹಾರಿವಾಳ, ಶ್ವೇತಾ ಬಸವರಾಜ ಕಿಣಗಿ, ಸ್ಪಂದನಾ ರವೀಂದ್ರ ಕಿಣಗಿ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಬಾಲ ಬಸವೇಶ್ವರರ ಬೆಳ್ಳಿಯ ಮೂರ್ತಿಯನ್ನು ತೊಟ್ಟಲದಲ್ಲಿ ಹಾಕಿ ತೊಟ್ಟಿಲು ತೂಗಿ ನಾಮಕಾರಣ ಮಾಡುವ ಮೂಲಕ ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಭಕ್ತರು ಸ್ಮಾರಕದ ಹೊರಗಿನಿಂದಲೆ ನೇವುದ್ಯೆ-ಕಾಯಿ-ಕರ್ಪೂರ ಸಲ್ಲಿಸಿ ನಮಸ್ಕರಿಸಿ ಹಿಂತಿರುಗುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು ಇದಕ್ಕೂ ಮುಂಚೆ ಪಟ್ಟಣದ ಮೂಲ ನಂದೀಶ್ವರ ದೇವಸ್ಥಾನದಲ್ಲಿ ಷಟಸ್ಥಲ ಧ್ವಜಾರೊಹಣ ನೆರವೇರಿತು.

ಪೂಜೆ ನಂತರ ಮಾಜಿ ಸಚಿವ ಹಾಲಿ ಶಾಸಕ ಶಿವಾನಂದ ಪಾಟೀಲ ಬಸವ ಜನ್ಮ ಸ್ಮಾರಕಕ್ಕೆ ಆಗಮಿಸಿ ಬಸವೇಶ್ವರರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿ ವರ್ಷವು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು ಈ ಬಾರಿ ಕೊರೋನಾ ಸೋಂಕಿನ 2ನೇ ಅಲೆಯ ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್‌ಡೌನ ಜಾರಿಯಾಗಿರುವ ಹಿನ್ನಲೆಯಲ್ಲಿ ಈ ಬಾರಿ ಕೇವಲ ನಾಲ್ಕು ಜನ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಅತೀ ಸರಳವಾಗಿ ಬಸವ ಜಯಂತಿಯನ್ನು ಆಚರಿಸಿರುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮನೆಯಿಂದ ಹೊರಬರದೆ ಮನೆಯಲ್ಲಿಯೇ ಬಸವ ನಾಮಸ್ಮರಣೆ ಮಾಡುವ ಮೂಲಕ ಬಸವ ಜಯಂತಿಯನ್ನು ಸರಳವಾಗಿ ಆಚರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಗೊಳಸಂಗಿ, ವೈ.ಡಿ. ನಾಯ್ಕೋಡಿ, ಈರನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಈರಣ್ಣ ಬಿರಾದಾರ, ಶೀರಸ್ತೆದಾರ ಶ್ರೀನಿವಾಸ ಕಲಾಲ ಬಸವೇಶ್ವರ ದೇವಸ್ಥಾನದ ಮೇಲ್ವಾಚರಕ ಎಸ್.ಜಿ.ಕಳ್ಳಿ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!