- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಶೋಕ ಹಾರಿವಾಳರಿಂದ ಪದಗ್ರಹಣ

ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಶೋಕ ಹಾರಿವಾಳರಿಂದ ಪದಗ್ರಹಣ

ಬಸವನಬಾಗೇವಾಡಿ : ಇಲ್ಲಿಯ ಪುರಸಭೆ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ ಅವರು ಪುರಸಭೆ ಕಾರ್ಯಾಲಯದಲ್ಲಿ ವಿಶ್ವಗುರು ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಪದಗ್ರಹಣ ಮಾಡಿದರು.

ತಬಲಾ ವಾಧಕ, ಬಸವನಾಡಿನ ಹಳ್ಳಿ ಹಕ್ಕಿ ಬಸವರಾಜ್ ಹೂಗಾರ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹಾಗೂ ಪುರಸಭೆಯ ಸರ್ವ ಸದಸ್ಯರ ಮುಖಂಡರ ಒಮ್ಮತದ ಮೇರೆಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆಯಾಗಿದ್ದು ಬರುವಂತ ದಿನಗಳಲ್ಲಿ ಸರ್ವ ಸದಸ್ಯರ ವಿಶ್ವಾಸ ಹಾಗೂ ಶಾಸಕರ ಮಾರ್ಗದರ್ಶನ ತಗೆದುಕೊಂಡು ನನ್ನ ಅಧಿಕಾರ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಲಕ್ಷಿಂಬಾಯಿ ಬೆಲ್ಲದ, ಸದಸ್ಯರಾದ ನೀಲಪ್ಪ ನಾಯಕ, ರವಿ ಪಟ್ಟಣಶೆಟ್ಟಿ, ನಿಂಗಪ್ಪ ಗುಂಡಳ್ಳಿ, ಪ್ರವೀಣ ಪೂಜಾರಿ, ಅಶೋಕ ಸಂಪನ್ನವರ, ನಜೀರ ಗಣಿ, ಅಬ್ದುಲ್‌ರಹೀಮಾನ್ ಚೌಧರಿ, ದೇವೇಂದ್ರ ಚವ್ಹಾಣ, ರವಿ ನಾಯ್ಕೋಡಿ, ಜಗದೇವಿ ಗುಂಡಳ್ಳಿ, ನಾಮನಿರ್ದೇಶನ ಸದಸ್ಯರಾದ ಅನೀಲ ಮುಳವಾಡ, ಪರಶುರಾಮ ಜಮಖಂಡಿ, ಸುರೇಶ ಲಮಾಣಿ, ರಾಜು ಮುಳವಾಡ ಮುಖಂಡರಾದ ಬಸಣ್ಣ ದೇಸಾಯಿ, ಸಂಗಪ್ಪ ವಾಡೇದ, ಸಂಜೀವ ಕಲ್ಯಾಣಿ, ಶರಣಪ್ಪ ಬೆಲ್ಲದ, ಕಲ್ಲು ಸೊನ್ನದ, ಉಮೇಶ ಅವಟಿ, ಸುರೇಶ ಹಾರಿವಾಳ, ಸುಬ್ಬು ಬಾಗೇವಾಡಿ, ಮಹೆತಾಬ ಬೋಮ್ಮನಹಳ್ಳಿ, ಮಹೇಶ ಬೆಕಿನಾಳ, ಜೀವನ ಮ್ಯಾಗೇರಿ, ಮುಖ್ಯಾಧಿಕಾರಿ ಬಿ.ಎ.ಸೌದಾಗರ ಸೇರಿದಂತೆ ಇತರರು ಇದ್ದರು.

ಪುರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ ಅವರಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು. ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ ಪೂಜೆ ಸಲ್ಲಿಸಿದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!