- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಸವಣ್ಣನವರ ನಾಮಕರಿಸಿ ಗೌರವ ಹೆಚ್ಚಿಸಿ. ಬಸವಾಭಿಮಾನಿಗಳಿಂದ ಆಗ್ರಹ

ಬಸವಣ್ಣನವರ ನಾಮಕರಿಸಿ ಗೌರವ ಹೆಚ್ಚಿಸಿ. ಬಸವಾಭಿಮಾನಿಗಳಿಂದ ಆಗ್ರಹ

ಬಸವನಬಾಗೇವಾಡಿ : ವಿಜಯಪುರ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಶ್ರೀ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿ ವಿಶ್ವಗುರು ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ… ಪಂಚಮಸಾಲಿ ಸ್ವಾಮಿಜಿಗಳಲ್ಲಿ ಭಿನ್ನಾಭಿಪ್ರಾಯ…? ಮನಗೂಳಿ ಮಠದಲ್ಲಿ ಮಹತ್ವದ ಸಭೆ…

ಪಟ್ಟಣದ ಬಸವ ಜನ್ಮ ಸ್ಮಾರಕದಲ್ಲಿ ವಿವಿಧ ಮಠಾಧೀಶರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ  ರ್ಯಾಲಿ ನಡೆಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಕೆಲ ಹೊತ್ತು ಸಾಂಕೇತಿಕ ಧರಣಿ ನಡೆಸಿದರು ನಂತರ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು  ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಎಂ.ಎನ್. ಬಳಿಗಾರ ಅವರಿಗೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ, ಸಂಗನಬಸವ ಮಹಾಸ್ವಾಮೀಜಿಗಳು ಮಾತನಾಡಿ 12ನೇ ಶತಮಾನದಲ್ಲಿ ಸಮಾನತೆಗಾಗಿ ಹೋರಾಡಿದ ಬಸವೇಶ್ವರರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಂವಿಧಾನದ ಪರಿಕಲ್ಪನೆಯನ್ನು ಕೊಟ್ಟವರು, ಬಸವೆಶ್ವರರು ಬರಿ ಒಂದು ಜಾತಿಗೆ ಸೀಮಿತಾಗದೆ ಇಡೀ ಮನುಕುಲದ ಒಳೆತಿಗಾಗಿ ಶ್ರಮಿಸುವ ಮೂಲಕ ಜಗತ್ತಿಗೆ ಗುರುವಾಗಿದ್ದಾರೆ ಇಂತಹ ಮಹಾಪುರುಷರು ಜನಿಸಿದ ಪವಿತ್ರ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರನ್ನಿಡುವುದರಿಂದ  ಮಹಾಪುರಷರ ತತ್ವ ಆದರ್ಶಗಳು ಇಡೀ ವಿಶ್ವಕ್ಕೆ ಪಸರಿಸಿದಂತಾಗುತ್ತದೆ ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ  ಬಸವೇಶ್ವರರ ಹೆಸರನ್ನಿಡಬೇಕು ಎನ್ನುವುದು ನಾಡಿನ ಮಠಾಧೀಶರ ಹಾಗೂ ಸಮಸ್ತ ಬಸವಾಭಿಮಾನಿಗಳ ಆಶಯವಾಗಿದೆ ಎಂದು  ಹೇಳಿದರು. 

ಊರಿನ ಹಿರಿಯರಾದ ಬಸವರಾಜ ಹಾರಿವಾಳ, ಬಸಣ್ಣ ದೇಸಾಯಿ, ಸಮಿತಿಯ ಪ್ರಮುಖರಾದ ಅರವಿಂದ ಕುಲಕರ್ಣಿ, ಕಾಶಿನಾಥ ಅವಟಿ, ಪ್ರಭಾಕರ ಖೇಡದ, ಶೇಖರ ಗೊಳಸಂಗಿ, ಅಶೋಕ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ,ಅರವಿಂದ ಸಾಲವಾಡಗಿ,  ಮಾಂತೇಶ ಸಾಸಾಬಾಳ, ಅಪ್ಪು ಬಂಗಾರಿ, ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ರವಿ ರಾಠೋಡ, ಖಾಜಂಬರ ನಧಾಪ, ಸ್ವರೂಪರಾಣಿ ಬಿಂಜಲಬಾವಿ, ಜಗದೇವಿ ಗುಂಡಳ್ಳಿ, ವಿನೂತ ಕಲ್ಲೂರ, ಶಿವಾನಂದ ತೋಳನೂರ, ಜಟ್ಟೀಂಗರಾಯ ಮಾಲಗಾರ, ಶಂಕ್ರೆಪ್ಪ ಹಾರಿವಾಳ, ಸಿದ್ದು ಮೇಟಿ, ಸುರೇಶಗೌಡ ಪಾಟೀಲ, ಬಸವರಾಜ ಪತ್ತಾರ, ರಜಿಯಾ ಬಿಜಾಪೂರ, ಅಜೀಜ ಬಾಗವಾನ, ಮುರಗೆಪ್ಪ ಚಿಂಚೋಳಿ, ಸಲೀಮ್ ಸಯ್ಯದ, ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!