- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಬಲಾದಿ ಮಠಕ್ಕೆ ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು

ಬಬಲಾದಿ ಮಠಕ್ಕೆ ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು

ವಿಜಯಪುರ : ಪವಾಡಗಳಿಂದಾಗಿ ನಾಡಿನಾದ್ಯಂತ ಬೆಂಕಿ ಬಬಲಾದಿ ಎಂದು ಹೆಸರುವಾಸಿಯಾಗಿರುವ ಬಬಲಾದಿ ಸದಾಶಿವ ಮಠಕ್ಕೆ ಸೋಮವಾರ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸುವ ಮೂಲಕ ತಮ್ಮ ಭಕ್ತಿ ಪರಾಕಾಷ್ಠೆಯನ್ನು ಮೆರೆದಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮಠಕ್ಕೆ ಸೋಮವಾರ ಬೆಳಿಗ್ಗೆಯಿಂದಲೇ ಭಕ್ತರು ಧಾವಿಸಿ, ಅಂಬಲಿ ನೈವ್ಯದ್ಯ ಅರ್ಪಿಸಿ ಭಕ್ತಿ ತೋರಿದ್ದಾರೆ. ಕೋವಿಡ್ ಬಗ್ಗೆ ಜನರಲ್ಲಿ ಯಾವುದೇ ಆತಂಕವಿಲ್ಲದೇ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಮಠಕ್ಕೆ ಆಗಮಿಸಿದ್ದು, ಕಳೆದ ಭಾನುವಾರ ರಾತ್ರಿಯಿಂದ ಸೋಮವಾರ ರಾತ್ರಿವರೆಗೆ ಅಂದಾಜು 40 ಸಾವಿರ ಜನರಿಂದ ದರ್ಶನ ಪಡೆದುಕೊಂಡಿರುವುದಾಗಿ ಅಂದಾಜಿಸಲಾಗಿದೆ.


ಕೊರೊನಾ ಹಿನ್ನೆಲೆಯಲ್ಲಿ ಮಠಕ್ಕೆ ಹೆಚ್ಚು ಜನ ಬರಬಾರದು ಎಂದು ಸಿದ್ದು ಮುತ್ಯಾ ಶ್ರೀಗಳು ಭಕ್ತರಲ್ಲಿ ಹಲವಾರು ಭಾರಿ ಮನವಿ ಮಾಡಿಕೊಂಡಿದ್ದರೂ ಕೂಡಾ, ಪಟ್ಟು ಬಿಡದ ಭಕ್ತರುಗಳು ಸಾಗರೋಪಾದಿಯಲ್ಲಿ ಮಠಕ್ಕೆ ಆಗಮಿಸಿದ್ದಾರೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಲಿ, ಮಾಸ್ಕ್ ಧರಿಸಿರುವುದಾಗಲಿ ಇರಲಿಲ್ಲ. ಒಬ್ಬನ್ನೋಬ್ಬರು ತಳ್ಳುತ್ತಾ ಅಂಬಲಿ ನೈವ್ಯಧ್ಯೆ ದೇವರಿಗೆ ನೆರವೇರಿಸುವುವುದು ಸಾಮಾನ್ಯವಾಗಿ ಕಂಡುಬಂದಿತು.

ಈ ಹಿಂದೊಮ್ಮೆ ಐದು ಸೋಮವಾರಗಳ ಕಾಲ ಮನೆಯಲ್ಲಿ ಅಂಬಲಿ ನೈವ್ಯದ್ಯ ಮಾಡಿದರೆ ಕೋರೋನಾ ತೊಂದರೆ ಕಡಿಮೆಯಾಗಲಿದೆ ಎಂದು ಮಠದ ಶ್ರೀಗಳಾದ ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದರು. ಆಗಲು ಕೂಡಾ ಮಠಕ್ಕೆ ಸಾವಿರಾರು ಭಕ್ತರು ನೈವ್ಯಧ್ಯೆ ತೆಗೆದುಕೊಂಡು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಆಗ ಶ್ರೀಗಳು ಮಠಕ್ಕೆ ಬರಬೇಡಿ ಎಂದು ಎಷ್ಟೇ ಮನವಿ ಮಾಡಿಕೊಂಡರು ಕೂಡಾ ಭಕ್ತರ ದಂಡೇ ಹರಿದುಬಂದಿತ್ತು. ಅದರಂತೆ ಸೋಮವಾರ ದಿನವೂವೂ ಕೂಡಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಅಂಬಲಿ ನೈವ್ಯಧ್ಯೆ ನೆರವೇರಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!