- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ್ರಭುಗೌಡ ದೇಸಾಯಿ ಅಭಿಮಾನಿಗಳ ಕಾರ್ಯ ಶ್ಲಾಘನೀಯ. ಸಿದ್ದಲಿಂಗ ಶ್ರೀಗಳಿಂದ ಮೆಚ್ಚುಗೆ

ಪ್ರಭುಗೌಡ ದೇಸಾಯಿ ಅಭಿಮಾನಿಗಳ ಕಾರ್ಯ ಶ್ಲಾಘನೀಯ. ಸಿದ್ದಲಿಂಗ ಶ್ರೀಗಳಿಂದ ಮೆಚ್ಚುಗೆ

ಮುದ್ದೇಬಿಹಾಳ : ಯಾರು ಸಂಕಷ್ಟದಲ್ಲಿರುತ್ತಾರೋ ಅಂತವರಿಗೆ ಅನ್ನ, ನೀರು ಕೊಟ್ಟು ಬದುಕಿಸುವವರೇ ಈ ಜಗತ್ತಿನಲ್ಲಿ ದೊಡ್ಡವರು ಎಂದು ತಾಳಿಕೋಟಿ ವಿರಕ್ತಮಠದ ಶ್ರೀ ಸಿದ್ದಲಿಂಗ ದೇವರು ಹೇಳಿದರು.

ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಲಾಕ್ ಡೌನ್ ವೇಳೆ ತೀವೃ ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ಕಡು ಬಡವರಿಗೆ ಇಂದು ಆಹಾರದ ಕಿಟ್ ವಿತರಿಸಿ ಮಾತನಾಡಿದ ಶ್ರೀಗಳು, ಕೇವಲ ಬ್ಯಾನರ್ ಹಾಕಿ ಅವರ ಹೆಸರು ಬರೆದುಕೊಂಡು ನಾನು ಅವರ ಅಭಿಮಾನಿ ಎಂದು ಹೇಳುವದಕ್ಕಿಂತ, ಯಾರು ತಮ್ಮ ಅಭಿಮಾನಿಗಳೇಂದು ನಂಬಿರುತ್ತಾರೋ ಅವರ ಹೆಸರಲ್ಲಿ ಹಸಿದವರ ಹೊಟ್ಟೆಗೆ ಊಟ ಕೊಟ್ಟು ಸ್ಪಂದಿಸುತ್ತಾರೋ ಅಂತವಹರು ನಿಜವಾದ ಅಭಿಮಾನಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಧ್ಯ ಕೋರೊನಾ ಎರಡನೇ ಅಲೇ ಬಂದು ನಮ್ಮೇಲ್ಲರ ನೆಮ್ಮದಿ ಕಸಿದುಕೊಂಡಿದೆ. ಜತೆಗೆ ಸರಕಾರ ಲಾಕ್ ಡೌನ್ ಆದೇಶಿಸಿದ ಹಿನ್ನೇಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಸಹ ದಿನಗೂಲಿ ಮಾಡಿಕೊಂಡು ಬದುವ ಕುಟುಂಭಗಳಿಗೆ ರಕ್ಷಣೆ ಇಲ್ಲದಂತಾಗಿದ್ದು,  ಇಂತಹ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಅಭಿಮಾನಿ ಬಳಗದವರು ಕಡು ಬಡವರಿಗೆ, ನಿರಾಶ್ರಿತರಿಗೆ ನೀರು ಮತ್ತು ಊಟ ಕೊಟ್ಟು ಮಾನವಿಯತೆ ಮರೆಯುವ ಮೂಲಕ ಅನ್ನ ದಾಸೋಹ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದರು.  

ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ನನ್ನೋಂದಿಗೆ ಇರುವ ಅಪಾರ ಯುವ ಮಿತ್ರರು ಸ್ನೇಹಿತರು ಸೇರಿಕೊಂಡು ನನನಗೇ ಗೊತ್ತಿಲ್ಲದಂತೆ ದಾಸೋಹ ಕಾರ್ಯಕ್ಕೆ ಪೂರ್ವ ಸಿದ್ದತೆ ಮಾಡಿಕೊಂಡಿರುವುದನ್ನು ಮನಗಂಡು ಅವರೊಂದಿಗೆ ನಾನು ಕೈಜೋಡಿಸಿದ್ದೇನೆ ಅಷ್ಠೇ ಸಧ್ಯ ಲಾಕ್ ಡೌನ ಮುಗಿಯುವವರೆಗೂ ಆಹಾರ ವಿತರಣೆ ಮುಂದುವರೆಯಲಿದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ), ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ, ಕರ್ನಾಟಕ ಕೋ ಆಪ್ ಬ್ಯಾಂಕ ಅಧ್ಯಕ್ಷ ಸತೀಶ ಓಸ್ವಾಲ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ ಡಿ ಕುಂಬಾರ, ಬಿಜೆಪಿ ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ದೇವೇಂದ್ರ ವಾಲಿಕಾರ, ಗಣ್ಯ ಉದ್ಯಮಿಗಳಾದ ಸಿ ಪಿ ಸಜ್ಜನ, ಸುನಿಲ ಇಲ್ಲೂರ, ಸತೀಶ ಕುಲಕರ್ಣಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಸಿದ್ದು ಹೆಬ್ಬಾಳ, ಮಂಜು ರತ್ನಾಕರ,ಮಹಾಂತೇಶ ಹಡಪದ, ಪ್ರಕಾಶ ಹೂಗಾರ, ಶ್ರೀದರ ಕಲ್ಲೂರ, ವಿರೇಶ ಕಲ್ಲೂರ, ವಿಜಯ ಲಿಂಗದಳ್ಳಿ, ಶಿವುಕುಮಾರ ದಡ್ಡಿ ಉಪಸ್ಥಿತರಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!