- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಿ. ಭಾರತಿ ಟಂಕಸಾಲಿ

ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಿ. ಭಾರತಿ ಟಂಕಸಾಲಿ

ವಿಜಯಪುರ : ನಗರದ ಕೆಎಸ್ಆರ್ಟಿಸಿ ಕಾಲೋನಿಯಲ್ಲಿ “ಸಂಭವ ಫೌಂಡೇಶನ್ ಮತ್ತು ಅನೌಪಚಾರಿಕ ಸಂಸ್ಥೆ” ವತಿಯಿಂದ ಆಶಾ ಕಾರ್ಯಕರ್ತರು ಹಾಗೂ ಸಂಸ್ಥೆಯ ಸಂಯೋಜಕರು, ಆಸ್ಪತ್ರೆಯ ಸಿಬ್ಬಂದಿಗಳು,  ಮನೆಮನೆಗೆ ತೆರಳಿ ಕೊವಿಡ್ ಲಸಿಕೆಯ ಕುರಿತು ಜಾಗೃತಿ ಮೂಡಿಸುತ್ತಾ, ಸಮೀಕ್ಷೆ ನಡೆಸಿದರು.

ಶಾಸಕ ಸೋಮನಗೌಡರ ಎದುರು ಕಣ್ಣೀರಿಟ್ಟು ಗೋಗರೆದ ಮಹಿಳೆಯರು

ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ ಮಾತನಾಡಿ, ಇತ್ತೀಚೆಗೆ ಜನಸಾಮಾನ್ಯರು ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜನರಿಗೆ ಆದಷ್ಟು ಬೇಗ ಲಸಿಕೆ ನೀಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇಶದಲ್ಲೆಡೆ ಹಾಗೂ ನಾಡಿನೆಲ್ಲೆಡೆ ನಡೆಯುತ್ತಿದ್ದು, ಸಾರ್ವಜನಿಕರು ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ತಿಳಿ ಹೇಳಿದರು.

ಸಂಸ್ಥೆಯ ಸಂಯೋಜಕರಾದ ಮೋಹನ್ ಪೋತದಾರ, ಆಶಾ ಕಾರ್ಯಕರ್ತರಾದ ಗಿರಿಜಾ ತೋಟದ, ಸಾವಿತ್ರಿ ಪೋತದಾರ, ಮುಜಾವರ್ ಭಕ್ಷಿ, ಯಾಸೀನ್ ಭಾಗವಾನ, ಶ್ವೇತ ತೋನಶಾಳ, ಸರೋಜಿನಿ ಪೋತದಾರ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!