- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ್ರತಿಬಾರಿ ಇದೆ ಆಯ್ತು. ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ ಮುದ್ದೇಬಿಹಾಳ ಕೈ ಮುಖಂಡ

ಪ್ರತಿಬಾರಿ ಇದೆ ಆಯ್ತು. ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ ಮುದ್ದೇಬಿಹಾಳ ಕೈ ಮುಖಂಡ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಒತ್ತುವರಿ ನೀರು ಹರಿದುಬಂದು ಸಂಪೂರ್ಣ ಜಲಾವೃತಗೊಂಡು ಸಾಕಷ್ಟು ಹಾನಿಗೊಳಗಾಗುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಾಲೂಕಿನ ನದಿ ತೀರದ ಗ್ರಾಮಗಳನ್ನು ಸ್ಥಳಾಂತರ ಮಾಡಿ, ಶಾಶ್ವತ ಪರಿಹಾರ ನೀಡಬೇಕು ಎಂದು ಕಾಂಗ್ರೇಸ್ ಹಿರಿಯ ಮುಖಂಡ ಹಾಗೂ ಎಪಿಎಂಸಿ ಸದಸ್ಯ ವಾಯ್.ಎಚ್. ವಿಜಯಕರ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೇದ ಹಲವು ವರ್ಷಗಳಿಂದ ತಾಲೂಕಿನ ಕೃಷ್ಣಾ ನದಿ ತೀರದ ಕಮಲದಿನ್ನಿ, ಕುಂಚಗನೂರ, ಗಂಗೂರ, ದೇವೂರ, ಸೇರಿದಂತೆ ಹಲವಾರು ಗ್ರಾಮಗಳು ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿ ಬಿಡುತ್ತಿರುವುದರಿಂದ, ನಾರಾಯಣಪೂರದ ಬಸವಸಾಗರ ಆಣೆಕಟ್ಟಿನ ಹಿನ್ನೀರು ಸಂಗ್ರಹಗೊಂಡು ಈ ಭಾಗದ ಬಹುತೇಕ ಗ್ರಾಮಗಳಿಗೆ ನೀರು ನುಗ್ಗಿ ನೂರಾರು ಮನೆಗಳು, ಮಠಗಳು, ಮುಳಗಿ ಜನ, ಜಾನುವಾರುಗಳು ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದ್ದು, ದಿನನಿತ್ಯ ಈ ಭಾಗದ ಜನತೆ ಭಯದಿಂದಲೇ ಬದುಕು ಸಾಗಿಸುವಂತಾಗಿರುವುದು ಆತಂಕ ವ್ಯಕ್ತಪಡಿಸಿದರು.

ಪ್ರತಿವರ್ಷ ತಹಶಿಲ್ದಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೇಟಿ ನೀಡಿ, ತಾತ್ಕಾಲಿಕ ಕ್ರಮ ಕೈಗೊಂಡು ನಂತರ ನೀರು ಹರಿಯುವಿಕೆ ಕಡಿಮೆಯಾದ ನಂತರ ಎಲ್ಲರೂ ಮರೆತುಬಿಡುತ್ತಾರೆ. ಇದು ಪ್ರತಿಬಾರಿಯೂ ಇದೇ ರೀತಿಯಾಗುತ್ತಿದೆ ಶಾಶ್ವತ ಪರಿಹಾರ ನೀಡುವುದು ಯಾವಾಗ ಎಂದು ಪ್ರಶ್ನಿಸಿದ ಅವರು, ಈ ಭಾಗದ ರೈತರು, ಮಕ್ಕಳ ಶಿಕ್ಷಣಕ್ಕೆ ತೀವೃ ತೊಂದರೆ ಅನುಭವಿಸುವಂತಾಗುತ್ತಿದೆ ಆದ್ದರಿಂದ, ಈ ಬಾರಿಯಾದರೂ ಎಲ್ಲ ಗ್ರಾಮಗಳನ್ನು ಸ್ಥಳಾಂತರ ಮಾಡಿ, ಪ್ರತ್ಯೇಕ ಪರಿಹಾರ ನೀಡಿ ಪುನರ್ವಸತಿ ಕೇಂದ್ರ ಸ್ಥಾಪಿಸಿ ಮೂಲಬೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಆ ಭಾಗದ ಜನರ ಸಂಕಷ್ಟದಿಂದ ಪಾರು ಮಾಡಿದರೇ ಅಲ್ಲಿಯ ಜನರು ನೇಮದಿಯ ಜೀವನ ನಡೆಸುವಂತಾಗುತ್ತದೆ ಇಲ್ಲದಿದ್ದರೆ ಈ ಸಮಸ್ಯೆ ಯಾವತ್ತಿಗೂ ತಪ್ಪಿದ್ದಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದಿದ್ದಾರೆ.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!