- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕಪೊಲೀಸರೊಂದಿಗೆ ವಿಜಯಾನಂದ ಕಾಶಪ್ಪನವರ ವಾಗ್ವಾದ

ಪೊಲೀಸರೊಂದಿಗೆ ವಿಜಯಾನಂದ ಕಾಶಪ್ಪನವರ ವಾಗ್ವಾದ

ಬಾಗಲಕೋಟ ‌: ಒಂದಲ್ಲಾ ಒಂದು ಕಾರಣಕ್ಕಾಗಿ ಆಗಾಗ ಸುದ್ದಿಯಲ್ಲಿ ಇರುವ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ‌ ಮನೆಯಲ್ಲಿ ಹೈ ಡ್ರಾಮಾ ನಡೆಯುವ ಮೂಲಕ ಈಗ ಮತ್ತೆ  ಸದ್ದು ಮಾಡಿದ್ದಾರೆ.

ಇಳಕಲ್ಲ ನಗರದಲ್ಲಿವ ವಿಜಯಾನಂದ ಕಾಶಪ್ಪನವರ ಮನೆಯಲ್ಲಿ ಗಲಾಟೆ ನಡೆದಿದೆ ಎಂದು ಅಕ್ಕಪಕ್ಕದ ‌ಮನೆಯವರಿಂದ ಪೊಲೀಸರಿಗೆ ಕರೆ ಮಾಡಿದ್ದರಿಂದ, ಇಳಕಲ್ ನಗರ ಠಾಣೆಯ ಪಿಎಸ್ ಐ ಎಸ್ ಬಿ ಪಾಟಿಲ್, ಹುನಗುಂದ ಸಿಪಿಐ ಹೊಸಕೇರಪ್ಪ ಕೋಳೂರ ಕಾಶಪ್ಪನವರ ಮನೆಗೆ ಆಗಮಿಸಿದ್ದಾರೆ.

ಮನೆಗೆ ಹೇಗೆ ಬಂದ್ರಿ ಎಂದು  ಪೊಲೀಸರ ‌ಮೇಲೆ ಕಾಶಪ್ಪನವರ ಗರಂ ಆಗಿ,ಸಿಪಿಐ, ಪಿ ಎಸ್ ಐ ಜೊತೆ ವಾಗ್ವಾದ ನಡೆಸಿದ್ದಾರೆ. ನಮ್ಮ ಮನೆಯಲ್ಲಿ ಗಲಾಟೆ ಎಲ್ಲಿ ಆಗಿದೆ ಸಾಬೀತು ಮಾಡಿ, ಎಸ್ ಪಿ ಕರೆಸಿ, ಎಲ್ಲಿದೆ ಎಸ್ ಪಿ ಆದೇಶ ಎಂದಿದ್ದಾರೆ. ಕಾಶಪ್ಪನವರ ಮನೆಗೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಹಳೆ‌ ಕೇಸ್  ಬೇಲೆಬಲ್ ವಾರೆಂಟ್ ಹಿಡಿದು ಬಂದಿದ್ದ ಪೊಲೀಸರು. ನೀವು ವಾರೆಂಟ್ ಅಂತ ಬಂದಿಲ್ಲ. ನಮ್ಮ ಮನೆಯಲ್ಲಿ ಗಲಾಟೆ ಅಂತ ಹೇಳಿದ್ದಾರೆ ಅದಕ್ಕೆ ಬಂದಿದ್ದೀರಿ, ನೀವು ಮನೆಯಲ್ಲಿ ನುಗ್ಗಿದಿರಿ ಗಲಾಟೆ ಅಂತ ಹೇಳಿದಿರಿ‌. ಎಲ್ಲಿ ಗಲಾಟೆ ಆಗಿದೆ ತೋರಿಸಿ, ನಾನು ತನಿಖೆಗೆ ಕೊಡುತ್ತೇನೆ ಎಂದು ಪೊಲೀಸರಿಗೆ ಆವಾಜ್ ಹಾಕಿದ ಕಾಶಪ್ಪನವರ್ ಅರೆಸ್ಟ್ ಮಾಡಿ, ಅರೆಸ್ಟ್ ಮಾಡೋಕೆ ಬಂದಿರಿ ಮಾಡಿ. ನೀವು ಕೇಸ್ ಹಾಕ್ತಿನಿ ನೋಡ್ಕೊತಿನಿ ಅಂದಿದ್ದೀರಿ. ಅರೆಸ್ಟ್ ಮಾಡಿ, ಎಷ್ಟು ಕೇಸ್ ಮಾಡ್ತಿರಿ ಮಾಡಿ ಎಂದ ವಿಜಯಾನಂದ ಪೊಲೀಸರು ನನ್ನ ಮನೆಗೆ ಆಕ್ರಮವಾಗಿ ನುಗ್ಗಿದಾರೆ. ವಿಥೌಟ್ ಸರ್ಚ್ ವಾರೆಂಟ್ ನುಗ್ಗಿದಾರೆ ಎಂದು ಆರೋಪಿಸಿದರು.

ಬೆಂಬಲಿಗರನ್ನು ಕರೆದುಕೊಂಡು‌ ಕಾಶಪ್ಪನವರ ಮನೆಯಲ್ಲಿಯೇ ಕೂತಿದ್ದಾರೆ. ಹುನಗುಂದ ಎಮ್ ಎಲ್ ಎ ದೊಡ್ಡನಗೌಡ ಕುಮ್ಮಕ್ಕಿನಿಂದ ಬಂದಿದ್ದೀರಿ, ಮನೆಗೆ ಬಂದು ದೌರ್ಜನ್ಯ ಮಾಡ್ತಿದ್ದೀರಿ ಎಂದು ಹೇಳಿದ ಕಾಶಪ್ಪನವರಿಗೆ ಪಿ ಎಸ್ ಐ, ಸಿಪಿಐ ನಾವು ಯಾರೆ ಕರೆ ಮಾಡಿದರೂ ಬರುತ್ತೇವೆ ಎಂದು ಕಾಶಪ್ಪನವರ ಗೆ ತಿಳಿಸಿದರು.

ಪತ್ನಿ ಜಿಪಂ‌ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಜೊತೆ ವಿಜಯಾನಂದ ಕಾಶಪ್ಪನವರ ಜಗಳ ನಡೆದಿದೆ ಎಂಬ ಶಂಕೆಯ ಮಾತುಗಳು ಕೇಳಿ ಬರುತ್ತಿವೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!