- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪೂಜೆ, ಹೋಮಗಳೆಲ್ಲ ನಮ್ಮ ಸಂಪ್ರದಾಯ. ಪ್ರಭುಗೌಡ ದೇಸಾಯಿ ಹೇಳಿಕೆ

ಪೂಜೆ, ಹೋಮಗಳೆಲ್ಲ ನಮ್ಮ ಸಂಪ್ರದಾಯ. ಪ್ರಭುಗೌಡ ದೇಸಾಯಿ ಹೇಳಿಕೆ

ಮುದ್ದೇಬಿಹಾಳ : ಇಡೀ ದೇಶವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದು, ಈ ದಿಸೇಯಲ್ಲಿ ಕೋರೊನಾ ನಿರ್ಮಾಮವಾಗಿ, ಎಲ್ಲರೂ ಮೊದಲಿನಂತೆ ಕ್ರೀಯಾಶಿಲರಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂಬ ಉದ್ದೇಶದಿಂದ ಇಂದು ಪಟ್ಟಣದ ಗ್ರಾಮದೇವತೆಗೆ ಪೂಜೆ ಸಲ್ಲಿಸಲಾಗಿದೆ ಎಂದು ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ಇಲ್ಲಿನ ಕುಂಬಾರ ಓಣಿಯಲ್ಲಿರುವ ಗ್ರಾಮ ದೇವತೆ ದೇವಸ್ಥಾನದಲ್ಲಿ ಇಂದು ಹಮ್ಮಿಕೊಂಡಿದ್ದ ಗ್ರಾಮದೇವತೆಗೆ ವಿಶೇಷ ಅಭಿಷೇಕ ಮಾಡಿ, ಉಡಿ ತುಂಬುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶತಮಾನದ ಹಿಂದೆ ಮುದ್ದೇಬಿಹಾಳದಲ್ಲಿ ಇದೇ ರೀತಿಯಲ್ಲಿ ಪ್ಲೇಗ ಎನ್ನುವ ಮಹಾಮಾರಿ ರೋಗ ಬಂದು ಜನರು ಎಲ್ಲಿಡೆ ಸಾಯುತ್ತಿದ್ದರು, ಆಗ ಓರ್ವರ ಕನಸಿನಲ್ಲಿ ಗ್ರಾಮದೇವತೆ ಕಾಣಿಸಿಕೊಂಡು ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಯ ಬಳಿ ಪ್ಲೇಗ ನಿವಾರಣೆಗೆ ಫಿಲೇಕಮ್ಮ ದೇವಿಯ ದೇವಸ್ಥಾನ ಕಟ್ಟಲು ಸೂಚಿಸಿದರಂತೆ ಅಂತೆಯೇ ಫಿಲೆಕಮ್ಮ ದೇವಸ್ಥಾನ ಕಟ್ಟಿ ತಾಯಿಗೆ ವಿಶೇಷ ಪೂಜೆಯನ್ನು ಮಾಡಿದನಂತರ ಊರಲ್ಲಿ ಮಹಾಮಾರಿಯಾಗಿದ್ದ ಪ್ಲೇಗ್ ತೊಲಗಿತಂತೆ ಹೇಳಲಾಗುತ್ತಿದೆ. ಪೂಜೆ ಪುನಸ್ಕಾರ ಹೋಮ ಹವನ ಇದು ನಮ್ಮ ಸಂಪ್ರದಾಯ ಮತ್ತು ನಂಬಿಕೆಯಾಗಿದ್ದು ಇಂದು ಗ್ರಾಮದೇವತೆ ಗೆ ವಿಶೇಷ ಪೂಜೆಯನ್ನು ಮಾಡಿ ಕರೋನವೆಂಬ ಕ್ರೂರಿ ರೋಗ ಸರ್ವನಾಶವಾಗಿ ಎಲ್ಲರು ಮೊದಲಿನಂತೆ ಬದುಕು ನಡೆಸುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ (ಕುಚಬಾಳ) ಬಿಜೆಪಿ ಮುಖಂಡ ವಿಕ್ರಮ್ ಓಸ್ವಾಲ್, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ್ ಓಸ್ವಾಲ್ ಮಾತನಾಡಿ, ದೇಶದಲ್ಲಿ ಉಂಟಾಗುವ ಅನೇಕ ವಿಪತ್ತುಗಳ ಪರಿಹಾರಕ್ಕೆ ದೇವರಲ್ಲಿ ಮೋರೆ ಹೋಗುತ್ತವೆ, ಸದ್ಯ ಕರೋನ ಮಹಾಮಾರಿಗೆ ವಿಶ್ವವೇ ತತ್ತರಿಸಿ ಹೋಗಿದೆ ಎಲ್ಲಡೆ ಸಾವು ನೋವು ತಾಂಡವ ಮಾಡುತ್ತಿದೆ, ಕರೋನದಿಂದ ದೇಶ ಮುಕ್ತವಾಗಲು ಶಕ್ತಿದೇವತೆಯಲ್ಲಿ ಪ್ರಾರ್ಥಿಸಿ ಪೂಜೆಯನ್ನು ಮಾಡಿದ್ದೇವೆ ದೈವಶಕ್ತಿಯಂಬುದು ಬಹು ದೊಡ್ಡದು ದೇವರಲ್ಲಿ ಪ್ರಾರ್ಥನೆಯ ಜೊತೆ ಗೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ,ಮಾಸ್ಕ್ ಧರಿಸುವುದು, ಕೈ ತೊಳೆದು ಕೊಳ್ಳುವುದು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ ಕುಂಬಾರ, ಮುರಳಿಕೃಷ್ಣ ಬುಡ್ಡೂಡಗಿ,ರುದ್ರಗೌಡ ಅಂಗಡಗೇರಿ,ದೇವೇಂದ್ರ ವಾಲಿಕಾರ, ದೂರೆ ಹಾಲಣ್ಣನವರ, ಸುರೇಶಗೌಡ ಪಾಟೀಲ್, ಮಹಾಂತೇಶ ಹಡಪದ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಪ್ರಕಾಶ ಹೂಗಾರ ಮುಂತಾದವರು ಉಪಸ್ಥಿತರಿದ್ದರು.

ವರದಿ : ಶ್ರೀಪಾದ ಜಂಬಗಿ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!