- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪುರಾತನ ಭಾವಿ ಪುನಶ್ಚೇತನ ನಮ್ಮೆಲ್ಲರ ಹೊಣೆ. ಚಂದ್ರಶೇಖರ ಶಿಚಾವಾರ್ಯ ಶ್ರೀ

ಪುರಾತನ ಭಾವಿ ಪುನಶ್ಚೇತನ ನಮ್ಮೆಲ್ಲರ ಹೊಣೆ. ಚಂದ್ರಶೇಖರ ಶಿಚಾವಾರ್ಯ ಶ್ರೀ

ಬಸವನಬಾಗೇವಾಡಿ: ಧಾರ್ಮಿಕ ಐತಿಹಾಸಿಕತೆ ಹೊಂದಿರುವ ಕರಿಭಂಟನಾಳದ ಪುರಾತನ ಭಾವಿಯನ್ನು ಪುನಶ್ಚೇತನಗೊಳಿಸುವ ಹೊಣೆ ನೆಮ್ಮೆಲ್ಲರ ಮೇಲೆ ಇದೆ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ರೈತರಿಗೆ ಅನುಕೂಲವಾಗುವ ಕೃಷಿ ಮೇಳ ಮಾಡುವ ಮೂಲಕ ರೈತರಿಗೆ ಅನುಕೂಲವಾಗುತ್ತದೆ ಎಂದು ಆಲಮೇಲದ ಚಂದ್ರಶೇಖರ ಶಿಚಾವಾರ್ಯ ಶ್ರೀಗಳು ಹೇಳಿದರು.

ತಾಲೂಕಿನ ಕರಭಂಟನಾಳ ಗ್ರಾಮದ ಗುರುಗಂಗಾಧರೇಶ್ವರ ಮಠದ ಶಿವಕುಮಾರ ಶ್ರೀಗಳ ನೇತೃತ್ವದಲ್ಲಿ ನ. 9ರಂದು ನಡೆಯುವ ಕೃಷಿ, ತೋಟಗಾರಿಕಾ ಮೇಳ ಹಾಗೂ ಗೋಷ್ಠಿ, ಧರ್ಮಸಭೆ, ಪುಷ್ಪ ಕಲ್ಯಾಣಿ ಹೊಂಡ ನವಿಕರಣ, ಗ್ರಾಮದೇವತೆಯ ದೇವಸ್ಥಾನ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಂದು ಬಾರಿ ಅತಿವೃಷ್ಠಿ ಇನ್ನೊಂದು ಬಾರಿ ಅನಾವೃಷ್ಠಿಯಿಂದ ರೈತರು ಸಂಕಷ್ಟಕ್ಕೆ ಸಿಲಿಕ್ಕಿದ್ದು. ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೃಷಿ ಮೇಳ, ಗೋಷ್ಠಿಗಳು ಆದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

Must Watch ವಿಜಯನಗರ ಸಾಮ್ಯಾಜ್ಯ ರಕ್ಷಕ. ವಿಜಯಪುರದ ಹನುಮಪ್ಪ ನಾಯಕ

 ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ್ದ ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿ ನಾವು ಮಾಡುವ ಕೆಲಸ ಕಾರ್ಯದ ಮೇಲೆ ಶ್ರದ್ಧೆಯಿಂದ ಮಾಡಿದಾಗ ಮಾತ್ರ ಆ ಕಾರ್ಯ ಯಶಸ್ವಿಯಾಗಲು ಸಾಧ್ಯ ಹಾಗೇ ಕೃಷಿಯಲ್ಲಿ ಕೂಡಾ ರೈತರು ಭೂಮಿಯ ಫಲವತ್ತತೆಯ ಬಗ್ಗೆ ಅರಿತುಕೊಂಡು ನಿರಂತರವಾಗಿ ಕಾಯಕ ಮಾಡಬೇಕು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಗುರುಗಂಗಾಧರೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಜಿ, ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ, ಮುಖಂಡರಾದ ಪ್ರಭುಗೌಡ ಬಿರಾದಾರ ಮಾತನಾಡಿದರು. ಮಾಹಾಂತಗೌಡ ಬಿರಾದಾರ ಸೇರಿದಂತೆ ಸಾಹಿತಿಗಳು, ರೈತರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಉಮಾಪತಿ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.  

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!