- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪುರಸಭೆ ಸಿಬ್ಬಂದಿಗಳು ಈಗ ಸೋಂಕಿತ ಶವಗಳ ಮುಕ್ತಿದಾತರು

ಪುರಸಭೆ ಸಿಬ್ಬಂದಿಗಳು ಈಗ ಸೋಂಕಿತ ಶವಗಳ ಮುಕ್ತಿದಾತರು

ಬಸವನಬಾಗೇವಾಡಿ : ದೇಶ ಸೇವೆಯೇ ಈಶ ಸೇವೆ ಎನ್ನುವ ಹಾಗೇ ಪಟ್ಟಣದ ಪುರಸಭೆಯ ಪೌರಕಾರ್ಮಿಕರು ದಿನನಿತ್ಯ ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರು ಸದ್ಯ ಕೊರೋನಾ ವೈರಸ್‌ಗೆ ತುತ್ತಾದವರ ಶವ ಸಂಸ್ಕಾರವನ್ನು ಮಾಡುವ ಮುಖಾಂತರ ಕಸ ಮುಕ್ತದೊಂದಿಗೆ ಸೋಂಕಿತ ಶವಗಳಿಗೆ ಮುಕ್ತಿ ನೀಡುತ್ತಿರುವ ಸಾಮಾಜಿಕ ಕಳಕಳಿಯ ಕಾರ್ಯ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇಲ್ಲಿನ ಪುರಸಭೆಯಲ್ಲಿ 46 ಜನ ಪೌರಕಾರ್ಮಿಕರಿದ್ದು ಕೋವಿಡ್-19 ರ ಮೊದಲ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಪಟ್ಟಣದ ಪ್ರತಿಯೊಂದು ಗಲ್ಲಿಯಲ್ಲಿ ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆ ಮಾಡುವ ಮೂಲಕ ಕೊರೋನಾ ವೈರಸ್‌ನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರೆ, ಇಂದು 2ನೇ ಅಲೆಯಲ್ಲಿ ಪೌರಕಾರ್ಮಿಕರು ಎದೆ ಗುಂದದೆ ಧೈರ್ಯದಿಂದ ಮುನ್ನುಗುತ್ತಾ ಪಟ್ಟಣದ ಸ್ವಚ್ಚತೆ, ಸೋಂಕು ಮುಕ್ತಗೊಳಿಸಲು ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆಯ ಜೊತೆಗೆ ಮನೆ, ಮನೆಗೆ ಗಾಡಿಯ ಮೂಲಕ ಕಸ ಸಂಗ್ರಹಣೆ ಮಾಡುತ್ತಿರುವುದು ಮಹತ್ವದ ಕಾರ್ಯವಾಗಿದೆ.

ಪಟ್ಟಣದಲ್ಲಿ ಪುರಸಭೆಯ ಪೌರಕಾರ್ಮಿಕರು ಪಿಪಿಇ ಕಿಟ್ ಧರಿಸಿ ಸೋಂಕಿತರ ಶವ ಸಂಸ್ಕಾರ (ಮುಕ್ತ) ಮಾಡುತ್ತಿರುವುದು.

ಇನ್ನು ಮಹಿಳಾ ಪೌರಕಾರ್ಮಿಕರು ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರಗೆ ಸ್ವಚ್ಚತಾ ಕಾರ್ಯದಲ್ಲಿ ತೊಡಗುತ್ತಾರೆ, 46 ಜನ ಪೌರಕಾರ್ಮಿಕರಲ್ಲಿ 6 ಜನರು ಶವ ಸಂಸ್ಕಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, 6 ಜನರಲ್ಲಿ ಅವಧಿಗೆ ಅನುಗುಣವಾಗಿ ಹಗಲು ವೇಳೆಯಲ್ಲಿ 3 ಜನರು ಹಾಗೂ ರಾತ್ರಿ ವೇಳೆಯಲ್ಲಿ 3 ಜನರು ಪಿಪಿಇ ಕಿಟ್ ಹಾಗೂ ಶವ ಸಾಗಣೆಗೆ ಪುರಸಭೆ ಮುಕ್ತಿ ವಾಹನ, ಜೆಸಿಬಿ ಬಳಸಿಕೊಂಡು ಆಯಾ ಧರ್ಮಗಳ ವಿಧಿ ವಿಧಾನದೊಂದಿಗೆ ಶವ ಸಂಸ್ಕಾರ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

ಪಟ್ಟಣದಲ್ಲಿ ಪುರಸಭೆಯ ಪೌರಕಾರ್ಮಿಕರು ಸ್ಯಾನಿಟೈಸರ್ ಸಿಂಪಡಿಸುತ್ತಿರುವುದು.

ಪೌರಕಾರ್ಮಿಕರು ಸ್ವಚ್ಚತಾ ಕಾರ್ಯ ಮಾಡುವಾಗ ಅಧಿಕಾರಿಗಳು ಪೌರಕಾರ್ಮಿಕರಿಗೆ ಒದಗಿಸಿದ ಕೈಗವಸ, ಮಾಸ್ಕ, ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಪುರಸಭೆ ಕೆಲ ಸಿಬ್ಬಂದಿ ನಿರ್ಗತಕರಿಗೆ ಊಟ ಪೂರೈಸುತ್ತಿದ್ದಾರೆ. ಇವರ ಕಾರ್ಯಗಳಿಗೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವರದಿ : ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!